Latest

ಅದಾನಿ ಕಂಪನಿಯಲ್ಲಿ ವಿದೇಶಿ ಹೂಡಿಕೆ ಬಗ್ಗೆ ಸೆಬಿ ತನಿಖೆ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಸ್ಥಗಿತಗೊಂಡಿದ್ದ ಉದ್ಯಮಿ ಗೌತಮ್‌ ಅದಾನಿ ಒಡೆತನದ ಅದಾನಿ ಎಂಟರ್‌ಪ್ರೈಸಸ್‌ನ 20 ಸಾವಿರ ಕೋಟಿ ರೂ. ಮೌಲ್ಯದ ಶೇರು  ಮಾರಾಟದ ವಹಿವಾಟಿನಲ್ಲಿ ಹೂಡಿಕೆಗಾಗಿ ಮುಂದೆ ಬಂದಿದ್ದ ಇಬ್ಬರು ಮಾರಿಷಸ್‌ ಹೂಡಿಕೆದಾರರಿಗೂ ಗೌತಮ್ ಅದಾನಿಯವರಿಗೂ ಇರುವ ನಂಟಿನ ರಹಸ್ಯ ಭೇದಿಸಲು ಮಾರುಕಟ್ಟೆನಿಯಂತ್ರಕ ‘ಸೆಬಿ’ ತನಿಖೆಗೆ ಮುಂದಾಗಿರುವ ಮಾಹಿತಿ ಲಭಿಸಿದೆ.

ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಿದ್ದ ಮಾರಿಷಸ್‌ ಮೂಲದ ಕಂಪನಿಗಳಾದ ಗ್ರೇಟ್‌ ಇಂಟರ್‌ನ್ಯಾಷನಲ್‌ ಟಸ್ಕರ್‌ ಫಂಡ್‌ ಮತ್ತು ಆಯುಷ್‌ಮತ್‌ ಲಿಮಿಟೆಡ್‌ನ ಹೂಡಿಕೆಗಳ ಬಗ್ಗೆ ಸೆಬಿ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.

ಅದಾನಿ ಸಮೂಹ ವ್ಯಾಪಾರದಲ್ಲಿ ಅಕ್ರಮ ಎಸಗಿರುವುದಾಗಿ  ಮಾಜಿ ಪಾಲುದಾರ ಕಂಪನಿ ಹಿಂಡನ್‌ಬರ್ಗ್‌ ಆರೋಪಿಸಿದ ಬೆನ್ನಲ್ಲೇ ಈ ತನಿಖೆ ಆರಂಭಗೊಂಡಿದೆ.

ಷೇರು ಮಾರಾಟ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿರುವುದರ ಹಾಗೂ ಭಾರತೀಯ ಭದ್ರತಾ ಕಾನೂನುಗಳ ಪಾಲನೆಯಲ್ಲಿನ ಲೋಪಗಳ ಸತ್ಯಾಸತ್ಯತೆ ಅ ಕುರಿತು ಸೆಬಿ ತನಿಖೆ ನಡೆಸುತ್ತಿದೆ. ಮಾರಿಷಸ್‌ ಕಂಪನಿಗಳು ಪ್ರಮುಖ ಹೂಡಿಕೆದಾರರಾಗಿದ್ದು, ಎಫ್‌ಪಿಒ  ಹಿಂಪಡೆಯಲು ಈ ಕಂಪನಿಗಳ ಹೂಡಿಕೆ ಕಾರಣವಾಗಿರುವ ಸಂದೇಹಗಳು  ವ್ಯಕ್ತವಾಗಿದ್ದು  ಈ ಕಂಪನಿಗಳು ಹಾಗೂ ಅದಾನಿ ಸಮೂಹದ ಸಂಬಂಧವನ್ನು ಸೆಬಿ ಭೇದಿಸಲಿದೆ.

ತಜ್ಞರ ಸಮಿತಿ ರಚನೆಗೆ ಸುಪ್ರೀಂ ಆದೇಶ
ಅದಾನಿ ಸಮೂಹ ಕಂಪನಿಗಳ ಷೇರು ಕುಸಿತದ ಬೆನ್ನಿಗೇ, ಷೇರುಪೇಟೆಗಳಲ್ಲಿ ಹೂಡಿಕೆದಾರರ ಹಿತ ಕಾಯಲು ಪ್ರಬಲವಾದ ವ್ಯವಸ್ಥೆಯೊಂದನ್ನು ರೂಪಿಸಬೇಕು. ಇದಕ್ಕಾಗಿ ನ್ಯಾಯಾಧೀಶರು ಸೇರಿದಂತೆ ವಿಷಯ ತಜ್ಞರು, ಹಾಗೂ ಮತ್ತಿತರರನ್ನು ಒಳಗೊಂಡ ಸಮಿತಿ ರಚಿಸಬೇಕಿದೆ ಎಂದು ಸುಪ್ರೀಂಕೋರ್ಟ್ ಸಲಹೆ ನೀಡಿದೆ.

ಅದಾನಿ ಸಮೂಹದ ವಿರುದ್ಧ ಹಲವು ಆರೋಪಗಳನ್ನು ಮಾಡಿರುವ ಹಿಂಡನ್‌ಬರ್ಗ್‌ ವರದಿ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಸಮಿತಿ ರಚಿಸಬೇಕು, ಅದಾನಿ ಕಂಪನಿಗಳ ಶೇರುಗಳ ಕೃತಕ ಕುಸಿತಕ್ಕೆ ಕಾರಣವಾಗಿರುವ ಹಿಂಡನ್‌ಬರ್ಗ್‌ ಸಂಸ್ಥೆಯ ಸಂಸ್ಥಾಪಕರ ವಿರುದ್ಧ ವಿಚಾರಣೆ ನಡೆಸಬೇಕು ಎಂದು ಕೋರಿದ್ದ 2 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ವೇಳೆ ಕೋರ್ಟ್‌ ಈ ಸೂಚನೆಗಳನ್ನು ನೀಡಿದೆ.

*ರೈಲಿಗೆ ತಲೆಕೊಟ್ಟು ಆದಾಯ ತೆರಿಗೆ ಇಲಾಖೆ ಇನ್ಸ್ ಪೆಕ್ಟರ್ ಆತ್ಮಹತ್ಯೆ*

https://pragati.taskdun.com/income-tax-inspectorsuiciderailway-trackbangalore/

ಇಂದು ಲೋಕಾರ್ಪಣೆಯಾಗಲಿದೆ ದೇಶದ 2ನೇ ಭಾರತಮಾತಾ ಮಂದಿರ

https://pragati.taskdun.com/the-2nd-bharat-mata-mandir-of-the-country-will-be-dedicated-today/

ಕಚೇರಿ ಕೆಲಸ 5 ದಿನಕ್ಕೆ ಸೀಮಿತಗೊಳಿಸಿ; ಒಂದು ತಾಸು ಕೆಲಸ ಹೆಚ್ಚಿಸಿ

https://pragati.taskdun.com/limit-office-work-to-5-days-increase-work-by-one-hour/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button