ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ದ್ವಿತೀಯ ಪಿ.ಯು.ಸಿ ಪೂರಕ ಪರೀಕ್ಷೆಯ 2ರ ವೇಳಾಪಟ್ಟಿ ಪ್ರಕಟವಾಗಿದೆ. ಆಗಸ್ಟ್ 21 ರಿಂದ ಸೆಪ್ಟಂಬರ್ 2 ರವರೆಗೆ ಪರೀಕ್ಷೆಗಳು ನಡೆಯಲಿವೆ.
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ 2022-23ನೇ ಸಾಲಿನ ಪರೀಕ್ಷೆ 2ನ್ನು ಮಂಡಳಿ ವತಿಯಿಂದ ನಡೆಸಲಾಗುವ 2022-23 ನೇ ಸಾಲಿನಲ್ಲಿ ಅನುತ್ತಿರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ಅದಕ್ಕಿಂತ ಹಿಂದಿನ ಸಾಲುಗಳಲಿ ಅನುತ್ತಿರ್ಣರಾದ ಅಭ್ಯರ್ಥಿಗಳಿಗೆ ಮಾತ್ರ ಪರೀಕ್ಷೆ ನೋಂದಾಯಿಸಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ.
ಸೋಮವಾರ ಆಗಸ್ಟ್ 21 ರಂದು (ಕನ್ನಡ, ಅರೇಬಿಕ್), ಮಂಗಳವಾರ 22 (ಐಚ್ಛಿಕ ಕನ್ನಡ, ರಾಸಾಯನಶಾಸ್ತ್ರ, ಮೂಲ ಗಣಿತ), ಬುಧವಾರ 23 (ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ), ಗುರುವಾರ 24 (ತರ್ಕಶಾಸ್ತ್ರ, ಹಿಂದುಸ್ತಾನಿ ಸಂಗೀತ, ವ್ಯವಹಾರ ಅಧ್ಯಯನ) 25 ಶುಕ್ರವಾರ (ಇತಿಹಾಸ, ಸಂಖ್ಯಾಶಾಸ್ತ್ರ). ಮಧ್ಯಾಹ್ನ 2.15 ರಿಂದ 5.30 ರವರೆಗೆ ಪರೀಕ್ಷೆಗಳು ನಡೆಯಲಿವೆ.
ಶನಿವಾರ 26 ರಂದು ಬೆಳಿಗ್ಗೆ 10.15 ರಿಂದ 12:30 ರವರೆಗೆ (ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆರಿ ನೆಸ್) ಹಾಗೂ ಮಧ್ಯಾಹ್ನ 2.15 ರಿಂದ 5.30 ರವರಿಗೆ (ಇಂಗ್ಲಿಷ್) ಪರೀಕ್ಷೆ ನಡೆಯಲಿವೆ.
ಸೋಮವಾರ 28 (ಭೂಗೋಳಶಾಸ್ತ್ರ, ಮನಶಾಸ್ತ್ರ, ಭೌತಶಾಸ್ತ್ರ) ಮಂಗಳವಾರ 29 (ಲೆಕ್ಕಶಾಸ್ತ್ರ ಭೂಗರ್ಭಶಾಸ್ತ್ರ, ಶಿಕ್ಷಣ ಶಾಸ್ತ್ರ, ವಗೃಹ ವಿಜ್ಞಾನ) ಬುಧವಾರ 30 (ರಾಜ್ಯಶಾಸ, ಗಣಿತಶಾಸ್ತ್ರ) ಗುರುವಾರ 31 (ಹಿಂದಿ) ಶುಕ್ರವಾರ ಸೆಪ್ಟಂಬರ್ 1 ರಂದು (ಅರ್ಥಶಾಸ್ತ, ಜೀವಶಾಸ್ತ್ರ) ಶನಿವಾರ ಸೆಪ್ಟೆಂಬರ್ 2 (ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತಿ, ಫ್ರೆಂಚ್) ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಲಿದೆ ಎಂದು ಬೆಳಗಾವಿ ಜಿಲ್ಲೆ ಪದವಿ ಪೂರ್ವ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ