Karnataka NewsLatest

ಬೆಳಗಾವಿ ಅಂಚೆ ಕಚೇರಿಯಿಂದ ಉದ್ಯೋಗಾವಕಾಶಕ್ಕೆ ನೇರ ಸಂದರ್ಶನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಇಲ್ಲಿನ ಅಂಚೆ ಕಚೇರಿ ವತಿಯಿಂದ ಅಂಚೆ ಜೀವ ವಿಮೆ ಅಥವಾ ಗ್ರಾಮೀಣ ಅಂಚೆ ಜೀವ ವಿಮಾ ಮಾರಾಟಕ್ಕಾಗಿ ಏಜೆಂಟ್‌ಗಳನ್ನು ತೊಡಗಿಸಿಕೊಳ್ಳಲು ವಾಕ್ ಇನ್ ಇಂಟರ್‌ವ್ಯೂ ನಡೆಯಲಿದೆ.

 ಜೂನ್ 27 2023 ರಂದು ಬೆಳಗ್ಗೆ 11 ಗಂಟೆಗೆ ಬೆಳಗಾವಿ ರೈಲ್ವೆ ನಿಲ್ದಾಣದ ಬಳಿ ಇರುವ ಅಂಚೆ ಕಚೇರಿಗಳ ಅಧೀಕ್ಷಕರ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಕೇಂದ್ರ/ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ, 10ನೇ ತರಗತಿ  ತೇರ್ಗಡೆಯಾದ 18 ರಿಂದ 50 ವರ್ಷ ವಯಸ್ಸಿನ ಅಭ್ಯರ್ಥಿಗಳು ತಮ್ಮ ಬಯೋ-ಡೇಟಾ, ವಯಸ್ಸಿನ ಪುರಾವೆ/ ಶೈಕ್ಷಣಿಕ ಅರ್ಹತೆ ಪ್ರಮಾಣಪತ್ರಗಳು, ವಿಳಾಸದೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು ಎಂದು  ಅಂಚೆ ಕಚೇರಿಗಳ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Related Articles

Home add -Advt

Related Articles

Back to top button