
ಪ್ರಗತಿವಾಹಿನಿ ಸುದ್ದಿ, ಅಥಣಿ : ಇಲ್ಲಿನ ಅಬಕಾರಿ ವಲಯ ವ್ಯಾಪ್ತಿಯ ಜ್ಯೋತಿಬಾ ಫುಲೆ ವೃತ್ತದಲ್ಲಿ ರಸ್ತೆಗಾವಲು ಮಾಡುವ ಸಮಯದಲ್ಲಿ ವ್ಯಕ್ತಿಯೊಬ್ಬ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿರುವ ಅಬಕಾರಿ ತಂಡ ೫ ಲೀಟರ್ ಅಕ್ರಮ ಮದ್ಯ ಹಾಗೂ ಸಾಗಾಟಕ್ಕೆ ಬಳಸಿದ ದ್ವಿಚಕ್ರ ವಾಹನ ವಶಪಡಿಸಿಕೊಂಡಿದೆ.
ವಾಹನ ಹಾಗೂ ಅಕ್ರಮ ಮದ್ಯದ ಮೌಲ್ಯ ೫೦,೫೦೦ಎಂದು ಅಂದಾಜಿಸಲಾಗಿದ್ದು ಆರೋಪಿ ಪರಾರಿಯಾಗಿದ್ದಾನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ