ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಉದ್ಯಮಬಾಗದಲ್ಲಿರುವ ಸೆಲಿಬ್ರೇಶನ್ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಹಾಗೂ ಇತರ ವಿಷಯಗಳನ್ನು ಚರ್ಚಿಸಲಾಯಿತು. ಅಧ್ಯಕ್ಷರಾಗಿ ರಾಮ ಭಂಡಾರೆ, ಉಪಾಧ್ಯಕ್ಷರಾಗಿ ಭರತ ದೇಶಪಾಂಡೆ, ಕಾರ್ಯದರ್ಶಿಯಾಗಿ ವಿಲಾಸ ಬದಾಮಿ, ಖಜಾಂಚಿಯಾಗಿ ಆರ್. ಎಸ್. ಕುಲಕರ್ಣಿ, ಜಂಟಿ ಕಾರ್ಯದರ್ಶಿಯಾಗಿ ವಿಲಾಸ ಜೋಶಿ ಆಯ್ಕೆಯಾದರು.
ಅಧ್ಯಕ್ಷ ರಾಮ ಭಂಡಾರೆ ಮಾತನಾಡಿ, “ಬೆಳಗಾವಿ ಜಿಲ್ಲೆ ಎಲ್ಲ ತಾಲೂಕುಗಳಲ್ಲಿರುವ ಬ್ರಾಹ್ಮಣ ಸಮಾಜದವರನ್ನು ಒಂದೆಡೆ ಸೇರಿಸಿ ಶಕ್ತಿಯುತ ಸಮಾಜವನ್ನಾಗಿ ಮಾಡುವಲ್ಲಿ ಸಂಘ ಶ್ರಮಿಸುತ್ತದೆ” ಎಂದು ಹೇಳಿದರು.
ಕಾರ್ಯದರ್ಶಿ ವಿಲಾಸ ಬದಾಮಿ ಸಂಘದ ಉದ್ದೇಶಗಳನ್ನು ವಿವರಿಸಿ, “ಸಮಾಜದ ಒಗ್ಗಟ್ಟು, ಪ್ರಗತಿ ಮತ್ತು ಒಳಿತಿಗಾಗಿ ಶ್ರಮಿಸುವುದು, ಸಮಾಜದ ಸಾಮಾಜಿಕ – ಆರ್ಥಿಕ ಸರ್ವತೋಮುಖ ಸುಧಾರಣೆಗಾಗಿ ಬೆಂಬಲ ನೀಡುವುದು. ತಾಂತ್ರಿಕ, ವೈದ್ಯಕೀಯ ಮತ್ತು ಸಾರ್ವಜನಿಕ ಸೇವಾ ಪರೀಕ್ಷೆಗಳಿಗಾಗಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳನ್ನು ಉತ್ತೇಜಿಸಲು ಬಹುಮಾನಗಳು ಹಾಗೂ ಸ್ಕಾಲರ್ಶಿಪ್ ಮೊದಲಾದವುಗಳ ಮೂಲಕ ಸಹಾಯ ಮಾಡುವುದು, ಉದ್ಯಮ ಅಥವಾ ಯಾವುದೇ ವಾಣಿಜ್ಯಾತ್ಮಕ ವ್ಯವಹಾರ ಆರಂಭಿಸಲು ನಮ್ಮ ಸಮಾಜದವರಿಗೆ ಬೆಂಬಲ ಒದಗಿಸುವುದು. ಮಹಿಳಾ ಉದ್ಯಮಕ್ಕೆ ಬೆಂಬಲ ನೀಡುವುದು ಸಾಮರ್ಥ್ಯ ಅಭಿವೃದ್ಧಿ ಕೇಂದ್ರಗಳನ್ನು ಮತ್ತು ಆರ್ ಆ್ಯಂಡ್ ಡಿ ಕೇಂದ್ರಗಳನ್ನು, ಸ್ಟಾರ್ಟಪ್ ಗಳನ್ನು ಪ್ರಾರಂಭಿಸಲು ಸಾಧ್ಯವಾದ ರೀತಿಯಲ್ಲಿ ಪ್ರೋತ್ಸಾಹ ಮತ್ತು ಬೆಂಬಲ ನೀಡುವುದು ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ