Latest

ಬೆಳಗಾವಿಯಿಂದ ಒಯ್ದು ಶಿರಸಿಯಲ್ಲಿ ಗಾಂಜಾ ಮಾರುತ್ತಿದ್ದಾತ ಬಲೆಗೆ

ಪ್ರಗತಿವಾಹಿನಿ ಸುದ್ದಿ, ಶಿರಸಿ: ನಗರದಲ್ಲಿ ಯುವಕರಿಗೆ  ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ 2 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಶಿಗ್ಗಾವ್ ಮೂಲದ ಭಾಷಾ ಸಾಬ್ ಬಂಧಿತ ಆರೋಪಿ. ಈತ ನಗರದ ಹಲವು ಯುವಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ.
ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ನಗರ ಠಾಣೆಯ ಪಿಎಸ್ಐ ಶಿವಾನಂದ ಆರೋಪಿಯನ್ನು ಬಂಧಿಸಿದ್ದಾರೆ. ಈತನ ಬಳಿ ಗಾಂಜಾ ಕೊಳ್ಳಲು ಬಂದಿದ್ದ ಸುಮಾರು 15 ಯುವಕರು ತಪ್ಪಿಸಿಕೊಂಡಿದ್ದು  ಅವರ ಹುಡುಕಾಟ ನಡೆದಿದೆ.
ಆರೋಪಿ ಭಾಷಾ ಸಾಬ್ ಗಾಂಜಾವನ್ನು ಬೆಳಗಾವಿಯಿಂದ ತರುತ್ತಿದ್ದು ಅಲ್ಲಿ ಈತನಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ದಲ್ಲಾಳಿಯನ್ನು ಹಿಡಿಯಲು ವಿಶೇಷ ತಂಡ ರಚಿಸಲಾಗಿದೆ.

Related Articles

Back to top button