ಬೆಳಗಾವಿ: ನಾಳೆ ಪ್ರಾ. ಬಿ.ಎಸ್. ಗವಿಮಠ ಸಮಗ್ರ ಸಾಹಿತ್ಯ ಕುರಿತು ವಿಚಾರ ಸಂಕಿರಣ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಾಹಿತ್ಯ ಭೂಷಣ ಬಿ.ಎಸ್. ಗವಿಮಠ ಅವರ ಸ್ನೇಹಿತರು ಹಾಗೂ ವಿದ್ಯಾರ್ಥಿಗಳ ನೇತೃತ್ವದಲ್ಲಿ ಅಕ್ಟೋಬರ್ 16ರಂದು ಮಧ್ಯಾಹ್ನ 3.30ಕ್ಕೆ ನಗರದ ಚನ್ನಮ್ಮ ವೃತ್ತದ ಕನ್ನಡ ಸಾಹಿತ್ಯ ಭವನದಲ್ಲಿ ಪ್ರಾ. ಬಿ.ಎಸ್. ಗವಿಮಠ ಸಮಗ್ರ ಸಾಹಿತ್ಯ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿದೆ.
ಖ್ಯಾತ ವೈದ್ಯ ಹಾಗೂ ನಾಡಹಬ್ಬ ಸಮಿತಿ ಅಧ್ಯಕ್ಷ ಡಾ. ಎಚ್.ಬಿ. ರಾಜಶೇಖರ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಸರಜೂ ಕಾಟ್ಕರ್ ಕಾರ್ಯಕ್ರಮ ಉದ್ಘಾಟಿಸುವರು. ಖ್ಯಾತ ಜಾನಪದ ವಿದ್ವಾಂಸ ಡಾ. ಬಸವರಾಜ ಜಗಜಂಪಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಗೋಷ್ಠಿ 1ರ ಅಧ್ಯಕ್ಷತೆಯನ್ನು ಹಾರೂಗೇರಿ ಬಿ.ಆರ್. ದರೂರ ಪ್ರಥಮ ದರ್ಜೆ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ. ವಿ.ಎಸ್. ಮಾಳಿ ವಹಿಸುವರು. ಕಿತ್ತೂರಿನ ಸರಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಪ್ರಜ್ಞಾ ಮತ್ತಿಹಳ್ಳಿ ಕೆಎಲ್ ಇ ಇತಿಹಾಸ “ನೂರರ ಸಿರಿಬೆಳಕು” ಕುರಿತು ಮಾತನಾಡುವರು.
ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿ ಜಯಶ್ರೀ ಎ.ಎಂ. ಅವರು ‘ಬಿ.ಎಸ್. ಗವಿಮಠರ ಕಾವ್ಯ ಸಾಹಿತ್ಯ’ ಕುರಿತು, ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಕಾರ್ಯದರ್ಶಿ ಡಾ. ಭಾರತಿ ಮಠದ ‘ವೈಚಾರಿಕ ಸಾಹಿತ್ಯ ಕೃತಿಗಳು, ಬಿ.ಎಸ್. ಗವಿಮಠರ ಕಾವ್ಯಸಾಹಿತ್ಯ’ ಕುರಿತು, ಕಾದಂಬರಿಕಾರ ಯ.ರು. ಪಾಟೀಲ ಅವರು ‘ಬಿ.ಎಸ್. ಗವಿಮಠರು ಮತ್ತು ಕನ್ನಡ ಸಂಘಟನೆಗಳು’ ಎಂಬ ವಿಷಯ ಕುರಿತು ಮಾತನಾಡಲಿದ್ದಾರೆ.
ಗೋಷ್ಠಿ 2ರ ಅಧ್ಯಕ್ಷತೆಯನ್ನು ರಂಗಚಿಂತಕ ಡಾ. ರಾಮಕೃಷ್ಣ ಮರಾಠೆ ವಹಿಸಲಿದ್ದಾರೆ. ಸಾಹಿತಿ ಡಾ. ಪಿ.ಜಿ. ಕೆಂಪಣ್ಣನವರ ‘ಜೀವನ ಚರಿತ್ರೆಗಳು’, ಸಾಹಿತಿ ಡಾ. ಎ.ಬಿ. ಘಾಟಗೆ ‘ಅನುವಾದಿತ ಕೃತಿಗಳು’, ರಂಗಚಿಂತಕ ಶಿರೀಷ ಜೋಶಿ ‘ಸಂಪಾದಿತ ಕೃತಿಗಳು’, ಕೆಎಲ್ ಇ ಪ್ರಸಾರಾಂಗ ನಿರ್ದೇಶಕ ಡಾ. ಮಹೇಶ ಎ. ಗುರನಗೌಡರ ‘ಕೆಎಲ್ ಇ ಪ್ರಸಾರಾಂಗಕ್ಕೆ ಗವಿಮಠರ ಕೊಡುಗೆ’ ಕುರಿತು ಮಾತನಾಡಲಿದ್ದಾರೆ.
ಸಮಾರೋಪ:
ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಧಕರಿಗೆ ಸತ್ಕಾರ ಸಮಾರಂಭ ನಡೆಯಲಿದೆ. ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು, ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಾಹಿತಿ ಡಾ. ಗುರುದೇವಿ ಹುಲ್ಲೆಪ್ಪನವರಮಠ, ಕರ್ನಾಟಕ ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ಕಾರ್ಯಕಾರಿ ನಿರ್ದೇಶಕ ಎಂ.ಜಿ. ಹಿರೇಮಠ ಪಾಲ್ಗೊಳ್ಳುವರು.
ವಿವಿಧ ಗಣ್ಯರು, ಹಿರಿಯ ಸಾಹಿತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮುರುಘಾ ಮಠದಲ್ಲಿ 4 ವರ್ಷದ ಹೆಣ್ಣು ಮಗು ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ