Beereshwara 27
Emergency Service

ಹಿರಿಯ ಉದ್ಯಮಿ ರತ್ನಾಕರ (ಕಾಕಾ) ಕಲಘಟಗಿ ನಿಧನ 

ಹಲವು ಗಣ್ಯರ ಸಂತಾಪ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಮಾದೇವಿ ಗಲ್ಲಿ ನಿವಾಸಿ, ಹಿರಿಯ ಉದ್ಯಮಿ ಹಾಗೂ ಸಾರಸ್ವತ ಬ್ಯಾಂಕ್ ಮಾಜಿ ನಿರ್ದೇಶಕ ರತ್ನಾಕರ (ಕಾಕಾ) ವಾಮನರಾವ್ ಕಲಘಟಗಿ (92) ಅವರು ಅಲ್ಪಕಾಲದ ಅನಾರೋಗ್ಯದಿಂದ ಭಾನುವಾರ ಬೆಳಗ್ಗೆ ನಿಧನರಾದರು.

ಅವರು ಪತ್ನಿ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಅವರ ಅಂತ್ಯಕ್ರಿಯೆ  ಸದಾಶಿವನಗರ ಚಿತಾಗಾರದಲ್ಲಿ ನಡೆಯಲಿದೆ.
ಅವರು ಸಹೃದಯ ವ್ಯಕ್ತಿ ಎಂದು ಹೆಸರಾಗಿದ್ದ ಅವರು, ಸಾರಸ್ವತ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಅವರು ಹಿರಿಯ ಸಾಮಾಜಿಕ ಕಾರ್ಯಕರ್ತ ಮತ್ತು ಚೇಂಬರ್ ಆಫ್ ಕಾಮರ್ಸ್ ನ  ಮಾಜಿ ಅಧ್ಯಕ್ಷ ವಿಕಾಸ ಕಲಘಟಗಿ ಅವರ ತಂದೆ.

ಕಾಕಾ ಕಲಘಟಗಿ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

https://pragati.taskdun.com/amit-shahs-stern-warning-sent-shockwaves-144-weapons-surrendered-in-manipur/

https://pragati.taskdun.com/waliboallsports-manwest-bengalkarnatakareach/

https://pragati.taskdun.com/mandyalorrycaraccident4-people-death/

Bottom Ad 1
Bottom Ad 2

You cannot copy content of this page