Kannada NewsLatest

ಹಿರಿಯ ನಾಗರಿಕರ ಹುಟ್ಟು ಹಬ್ಬ ಕಾರ್ಯಕ್ರಮ

ಹಿರಿಯ ನಾಗರಿಕರ ಹುಟ್ಟು ಹಬ್ಬ ಕಾರ್ಯಕ್ರಮ

 ಪ್ರಗತಿವಾಹಿನಿ ಸುದ್ದಿ – ಬೆಳಗಾವಿ :  ಶ್ರೀ ಗುರು ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ, ಶ್ರೀನಗರ ಬೆಳಗಾವಿಯಲ್ಲಿ, ಹಿರಿಯ ನಾಗರಿಕರ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಆಚರಿಸಲಾಯಿತು

ಶ್ರೀ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ(ರಿ), ಬೆಳಗಾವಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಬೆಳಗಾವಿ ಇವರ ಸಹಯೋಗದೊಂದಿಗೆ ಶ್ರೀ ಗುರು ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ, ಡಬಲ್ ರೋಡ ಶ್ರೀನಗರ, ಬೆಳಗಾವಿಯಲ್ಲಿ ಹಿರಿಯ ನಾಗರಿಕರ ಹುಟ್ಟು ಹಬ್ಬ ಆಚರಣೆಯನ್ನು ಆಚರಿಸಲಾಯಿತು.

ಕೇಂದ್ರದ ಸದಸ್ಯರಾದ ಎಸ್. ಆಯ್. ಬೀಳಗಿ 78 ವರ್ಷ, ಬಿ. ಎಸ್. ಸಸಾಲಟ್ಟಿ 77 ವರ್ಷ, ಜಿ. ಆರ್. ಕುಲಕರ್ಣಿ 63 ವರ್ಷ ಮತ್ತು ಆರ್. ಬಿ. ಬಂಡಿವಡ್ಡರ 65 ನೇ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಆಚರಿಸಲಾಯಿತು.

ನಂತರ ತಮ್ಮ ಸೇವಾ ನಿವೃತ್ತಿ ಜೀವನದ ಬಗ್ಗೆ ಮತ್ತು ಶ್ರೀ ಗುರು ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಅದರಂತೆ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರದ ಹಿರಿಯ ನಾಗರಿಕರ ಸದಸ್ಯರಾದ ವಾಯ್. ವಾಯ್. ಗಡಕರಿ ರವರು ಕೇಂದ್ರದಲ್ಲಿ ಸದಸ್ಯರಿಗೆ ನೀಡುತ್ತಿರುವಂತಹ ಸೌಲಭ್ಯಗಳ ಬಗ್ಗೆ ಹಾಗೂ ಹಿರಿಯ ನಾಗರಿಕರು ತಮ್ಮ ಸೇವಾ ನಿವೃತ್ತಿ ಹೊಂದಿದ ನಂತರ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳದೇ ಮನೋಸ್ಥೈರ್ಯ ಹಾಗೂ ಕ್ರಿಯಾಶೀಲತೆಯಿಂದ ನಗು-ನಗುತ್ತಾ ತಮ್ಮ ಜೀವನವನ್ನು ಮಕ್ಕಳು ಹಾಗೂ ಮೊಮ್ಮಕ್ಕಳೊಂದಿಗೆ ಕಳೆಯ ಬೇಕೆಂದು ಹೇಳಿದರು.

ನಂತರ ಸಂಸ್ಥೆಯ ಅಧ್ಯಕ್ಷರಾದ  ಶ್ರೀಕಾಂತ ಗು ಹಿರೇಮಠರವರು ಹಿರಿಯ ನಾಗರಿಕರಿಗಾಗಿ ಇರುವ ಸರ್ಕಾರದ ಸೌಲಭ್ಯಗಳ ಬಗ್ಗೆ ಹಾಗೂ ಹಿರಿಯ ನಾಗರಿಕರಾದವರು ಇವತ್ತಿನ ಯುವ ಪೀಳಿಗೆಗೆ ಮಾರ್ಗದರ್ಶನದ ಅವಶ್ಯಕತೆಯಿದ್ದು ತಮ್ಮ ಸಲಹೆ ನೀಡಬೇಕೆಂದು ಹಾಗೂ ಎಲ್ಲರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುಬೇಕೆಂದು ಹೇಳಿದರು.

ಈ ಕಾರ್ಯಕ್ರಮವನ್ನು ಕೇಂದ್ರದ ಆಪ್ತಸಮಾಲೋಚಕರಾದ ಮಹಾವೀರ ಪಾ ಘುಳನ್ನವರ ನಿರೂಪಿಸಿದರು. ಕೇಂದ್ರದ ಸುನಿತಾ ಎಸ್ ಹಿರೇಮಠ ಸ್ವಾಗತಿಸಿದರು ಹಾಗೂ ಪರಶುರಾಮ ಗುರಪ್ಪಗೋಳ ವಂದನೆಗಳನ್ನು ಸಲ್ಲಿಸಿದರು.

ಶ್ರೀ ಗುರು ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದ ಸಿಬ್ಬಂದಿಗಳಾದ ಸರಿತಾ ಅಜಪ್ಪಗೋಳ, ಎಸ್. ಎಮ್. ಡೊಂಗರೆ ಹಾಗೂ ಎ. ಕೆ. ಬಂಗೆನ್ನವರ ಹಾಜರಿದ್ದರು ಮತ್ತು ಕೇಂದ್ರದ 71 ಜನ ಹಿರಿಯ ನಾಗರಿಕರು ಹಾಜರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೇರವೆರಿಸಲಾಯಿತು.///

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button