Belagavi NewsBelgaum NewsKannada NewsKarnataka NewsLatest

ಹಿರಿಯ ಪತ್ರಕರ್ತ ಶಿವಪುತ್ರ ಯಾದವಾಡ ನಿಧನ

ಪ್ರಗತಿವಾಹಿನಿ ಸುದ್ದಿ, ಅಥಣಿ: ಹಿರಿಯ ಪತ್ರಕರ್ತ ಶಿವಪುತ್ರ ಯಾದವಾಡ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು.

ಸ್ವಲ್ಪ ಕಾಲದ ಅನಾರೋಗ್ಯದ ನಂತರ ಅವರು ಮನೆಯಲ್ಲೇ ನಿಧನರಾದರು. ಅವರಿಗೆ ಪತ್ನಿ, ಮೂವರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಇದ್ದಾರೆ. ಮಂಗಳವಾರ ರಾತ್ರಿ ಅವರು ನಿಧನರಾಗಿದ್ದು, ಬುಧವಾರ ಬೆಳಗ್ಗೆ ಅಂತ್ಯಕ್ರಿಯೆ ನೆರವೇರಿತು.

Home add -Advt

ಚಿಕ್ಕಂದಿನಿಂದ ಬಡತನ, ಕಷ್ಟಗಳ ಸವಾಲುಗಳನ್ನು ಎದುರಿಸಿ ವೃತ್ತಿಯ ಜೊತೆಗೆ ಹವ್ಯಾಸಗಳೊಂದಿಗೆ ಬದುಕು ಕಟ್ಟಿಕೊಂಡ ಅಪರೂಪದ ವ್ಯಕ್ತಿ.

ಸದಾ ಕ್ರಿಯಾಶೀಲ ವ್ಯಕ್ತಿತ್ವ ಎಲ್ಲರನ್ನು ಪ್ರೀತಿಸುವ ಗೌರವಿಸುವ, ಹಂಚಿಕೊಳ್ಳುವ ಸ್ವಭಾವದವರಾಗಿದ್ದರು. ವೃತ್ತಿಯಿಂದ ಬ್ಯಾಂಕ್ ಉದ್ಯೋಗಿಯಾಗಿದ್ದರೂ ಪ್ರವೃತ್ತಿಯಿಂದ ಪತ್ರಕರ್ತರಾಗಿ ಸಾಹಿತಿಯಾಗಿ, ಸಂಘಟಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ಯೋಗಪಟುವಾಗಿ, ಸದಾ ಕನ್ನಡ ಕಟ್ಟಾಳುವಾಗಿ ಗಡಿಭಾಗದಲ್ಲಿ ಸಲ್ಲಿಸಿದ ಸೇವೆ ಅಪಾರ.

Related Articles

Back to top button