
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಮನವಮಿ ಮೆರವಣಿಗೆ ವೇಳೆ ಕನ್ನಡ ಬಾವುಟ ಪ್ರದರ್ಶಿಸಿದ್ದಕ್ಕಾಗಿ ಯುವಕನೊಬ್ಬನ ಮೇಲೆ ಗಂಭೀರ ಹಲ್ಲೆ ನಡೆಸಲಾಗಿದೆ.

ನಗರದ ರಾಮಲಿಂಗಖಿಂಡಗಲ್ಲಿಯಲ್ಲಿ ಈ ಘಟನೆ ನಡೆದಿದೆ. ರಾಮನವಮಿ ಮೆರವಣಿಗೆ ಶಿವಸೇನೆ ಕಚೇರಿ ಎದುರಿನಿಂದ ಹಾದು ಹೋಗುತ್ತಿದ್ದ ವೇಳೆ ಕೈಯ್ಯಲ್ಲಿ ಕನ್ನಡ ಬಾವುಟ ಹಿಡಿದಿದ್ದ ಯುವಕನ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ.
ಇದರಿಂದಾಗಿ ಕನ್ನಡಿಗ ಯುವಕನ ಬೆನ್ನು, ಹೊಟ್ಟೆಗೆ ತೀವ್ರ ಗಾಯಗಳಾಗಿವೆ. ಈ ಕುರಿತು ಕನ್ನಡ ಹೋರಾಟಗಾರರು ನೀಡಿದ ದೂರಿನ ಆಧಾರದಲ್ಲಿ ಖಡೇಬಜಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ