
ಪ್ರಗತಿವಾಹಿನಿ ಸುದ್ದಿ; ಪೆರು: ಪ್ರಸಿದ್ಧ ಪ್ರವಾಸಿ ತಾಣ ಪೆರುವಿನ ನಾಜ್ಕಾ ಲೈನ್ ನಲ್ಲಿ ಟೂರಿಸ್ಟ್ ವಿಮಾನವೊಂದು ಪತನಗೊಂಡಿದ್ದು, 7 ಜನರು ದುರ್ಮರಣ ಹೊಂದಿದ್ದಾರೆ.
ವಿಮಾನ ಟೇಕ್ ಆಫ್ ಆದ ಕೆಲ ಹೊತ್ತಲ್ಲೇ ವಿಮಾನ ಪತನಗೊಂಡಿದೆ. ಇಬ್ಬರು ಸಿಬ್ಬಂದಿಗಳು, 5 ಜನ ಪ್ರವಾಸಿಗರು ಸೇರಿದಂತೆ ಒಟ್ಟು 7 ಜನರು ಸಾವನ್ನಪ್ಪಿದ್ದಾರೆ ಎಂದು ಪೆರು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏರ್ ಸಾಂಟೋಸ್ ಕಂಪನಿಗೆ ಸೇರಿದ ವಿಮಾನ ಇದಾಗಿದ್ದು, ಸೆಸ್ನಾ 207 ಸಿಂಗಲ್ ಇಂಜಿನ್ ವಿಮಾನವಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.
ಪದ್ಮಶ್ರೀ ಪುರಸ್ಕೃತ ಸೂಫಿ ಸಂತ ಇಂಬ್ರಾಹಿಂ ಸುತಾರ್ ಇನ್ನಿಲ್ಲ