Kannada NewsKarnataka NewsNational

*ಬಹುಮಹಡಿ ಕಟ್ಟಡ ಕುಸಿದು ಏಳು ಜನರ ಸಾವು*

ಪ್ರಗತಿವಾಹಿನಿ ಸುದ್ದಿ: ಗುಜರಾತನ ಸೂರತ್ ನ ಸಚಿನ್ ಪಾಲಿ ಎಂಬ ಗ್ರಾಮದಲ್ಲಿ ಶನಿವಾರ ಬಹುಮಹಡಿ ಕಟ್ಟಡ ಕುಸಿದು ಬಿದ್ದು, ಅದರ ಅವಶೇಷದಡಿ ಬಿದ್ದು ಏಳು ಮಂದಿ ಅಸುನೀಗಿದ್ದಾರೆ. ಅಲ್ಲದೇ ಅನೇಕ ಜನರು ಅವಶೇಷಗಳಡಿ ಸಿಲುಕಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳದಲ್ಲಿ ಅಗ್ನಿಶಾಮಕದಳ ಮತ್ತು ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆಸಿ ಏಳು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಐದರಷ್ಟು ಕುಟುಂಬಗಳು ಇದೇ ಕಟ್ಟಡದಲ್ಲಿ ವಾಸಿಸಯತ್ತಿದ್ದು, ಅವರಿಗೂ ಅಪಾಯ ಎದುರಾಗುವ ಸಾಧ್ಯತೆಯಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಇನ್ನೂ ಹಲವರು ಒಳಗೆ ಸಿಲುಕಿರುವ ಸಾಧ್ಯತೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರು ಅಂತಸ್ತಿನ ಈ ಕಟ್ಟಡದಲ್ಲಿ 35 ಕೊಠಡಿಗಳಿದ್ದು, ಕಟ್ಟದಲ್ಲಿ ಐದರಿಂದ ಏಳು ಕುಟುಂಬಗಳು ಪ್ರಾಣವನ್ನೇ ಪಣಕ್ಕಿಟ್ಟು ಜೀವನ ನಡೆಸುತ್ತಿವೆ. ಮಾಹಿತಿ ಪ್ರಕಾರ, ಈ ಸಂಪೂರ್ಣ ಕಟ್ಟಡದ ಮಾಲೀಕರು ವಿದೇಶಿ ಮಹಿಳೆಯಾಗಿದ್ದು, ಇಲ್ಲಿ ಕೊಠಡಿಗಳನ್ನು ಬಾಡಿಗೆಗೆ ನೀಡುತ್ತಿದ್ದರು ಎಂದು ಹೇಳಲಾಗಿದೆ.

Home add -Advt

ಭಾರೀ ಮಳೆಯಿಂದಾಗಿ ಶಿಥಿಲಗೊಂಡ ಕಟ್ಟಡ ಕುಸಿದಿದ್ದು,  ರಕ್ಷಣಾ ಕಾರ್ಯ ಭರದಿಂದ ಸಾಗಿದೆ.  ಎನ್‌ಡಿಆರ್‌ಎಫ್ ತಂಡ ಅವಶೇಷಗಳಡಿಯಿಂದ ರಕ್ಷಿಸಲು ಯತ್ನಿಸುತ್ತಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button