*ಲೈಂಗಿಕ ಕಿರುಕುಳ: ಪ್ರೊಫೆಸರ್ ಅಮಾನತು, ಟರ್ಮಿನೇಶನ್ ಗೆ ಶಿಫಾರಸ್ಸು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ 54ನೇ ವಿಶೇಷ ತುರ್ತು ಸಿಂಡಿಕೇಟ್ ಸಭೆಯನ್ನು ಜರುಗಿಸಲಾಯಿತು.
ಈ ಸಿಂಡಿಕೇಟ್ ಸಭೆಯಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು ಮತ್ತು ಎಲ್ಲಾ ಸಿಂಡಿಕೇಟ್ ಸದಸ್ಯರು ಹಾಜರಿದ್ದರು.
ವಿಶ್ವವಿದ್ಯಾಲಯದ ವಿಜಯಪುರದ ಸ್ನಾತಕೋತ್ತರ ಪದವಿ ಕೇಂದ್ರದಲ್ಲಿ ಇತಿಹಾಸ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೊಫೆಸರ್ ಕೆಎಲ್ಎನ್ ಮೂರ್ತಿ ಇವರ ವಿರುದ್ಧ ಸಂಶೋಧನಾ ವಿದ್ಯಾರ್ಥಿನಿ ಒಬ್ಬರು ವಿರುದ್ಧ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡಿರುವ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು Sexual harassment of women at workplace (prevention prohibition and redressal) act 2013 and UGC (prevention prohibition and redressal of sexual harassment etc) regulations 2015 ರಡಿಯಲ್ಲಿ ರಚಿಸಲಾಗಿರುವ ಆಂತರಿಕ ಸಮಿತಿ ವಿವರವಾಗಿ ತನಿಖೆಯನ್ನು ಮಾಡಿ ತನಿಖಾ ವರದಿಯನ್ನು ಸಲ್ಲಿಸಿದೆ.
ವರದಿಯಲ್ಲಿ ಆರೋಪಗಳು ರುಜುವಾತು ಆಗಿರುವ ಬಗ್ಗೆ ಸ್ಪಷ್ಟ ವರದಿ ನೀಡಿದ ಹಿನ್ನೆಲೆಯಲ್ಲಿ ಆರೋಪಿತ ಪ್ರಾಧ್ಯಾಪಕರನ್ನು ಸೇವೆಯಿಂದ ಅಮಾನತ್ತುಗೊಳಿಸಿರುವುದನ್ನು ಸಭೆಯು ಒಕ್ಕೊರಲಿನಿಂದ ಸ್ವಾಗತಿಸಿ, ಅನುಸಮರ್ಥನೆ ನೀಡಿತು.
ಸಿಂಡಿಕೇಟ್ ಸದಸ್ಯರಾದ ಈರಣ್ಣ ಹಪ್ಪಳಿ, ವಿನೀತ್ ಜೋಶಿ, ಮಹಾಂತೇಶ್ ಕಂಬಾರ, ಡಾಕ್ಟರ್ ಕಾವೇರಿ ಎಚ್ಎಂ, ರಫಿ ಬಂಡಾರಿಯವರು ಹಾಗೂ ಉಳಿದೆಲ್ಲಸದಸ್ಯರು ಈ ಪ್ರಕರಣದಲ್ಲಿ exemplary ರೀತಿಯ ಕ್ರಮ ಕೈಗೊಂಡು ವಿಶ್ವವಿದ್ಯಾಲಯದಿಂದ ಒಳ್ಳೆಯ ಸಂದೇಶ ರವಾನಿಸುವುದು ಸೂಕ್ತ. Suspension is not a punishment ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂದೆ ಇಂತಹ ಘಟನೆಗಳು ವಿಶ್ವವಿದ್ಯಾಲಯ ಅಥವಾ ಯಾವುದೇ ಸಂಯೋಜಿತ ಮಹಾವಿದ್ಯಾಲಯ ಅಥವಾ ಯಾವುದೇ ಕಚೇರಿ ವ್ಯಾಪ್ತಿಯಲ್ಲಿ ಮರುಕಳಿಸದಂತೆ ನೋಡಿಕೊಳ್ಳಲು ಸರ್ಕಾರದ ಆದೇಶ ಮತ್ತು UGC, ಸೇವಾ ನಿಯಮಾವಳಿಗಳ ಪ್ರಕಾರ ಇವರನ್ನು ಸೇವೆಯಿಂದ ಟೆರ್ಮಿನೇಷನ್ ಮಾಡಲು ಅಥವಾ ಟೆಂಪರರಿ ರಿಮೂವಲ್ ಮಾಡುವ ಬಗ್ಗೆ ನಿರ್ಣಯ ಅಂಗೀಕರಿಸಿ, ಮಾಹಿತಿಯನ್ನು ಸರ್ಕಾರಕ್ಕೆ ಮತ್ತು ರಾಜ್ಯಪಾಲರಿಗೆ ಸಲ್ಲಿಸಲು ತೀರ್ಮಾನಿಸಿದರು.
ಪ್ರಕರಣದ ಬಗ್ಗೆ ವಿವರವಾದ ತನಿಖೆ ನಡೆಸಲು ಸಿಂಡಿಕೇಟ್ ನಿರ್ಣಯಿಸಿದೆ. ಶಿಸ್ತು ಕ್ರಮವನ್ನು ಜರುಗಿಸುವಲ್ಲಿ ಯಾವುದೇ ಕಾನೂನಾತ್ಮಕ ತೊಂದರೆಗಳಾಗದಂತೆ ಕ್ರಮವಹಿಸಲು ಸಿಂಡಿಕೇಟ್ ತೀರ್ಮಾನಿಸಿದೆ. ಎಲ್ಲಾ ಸಂಶೋಧನಾ ವಿದ್ಯಾರ್ಥಿಗಳಿಗೆ, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಕಾನೂನು ಮತ್ತು ರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ಸಿಂಡಿಕೇಟ್ ತೀರ್ಮಾನಿಸಿದೆ. ಆಂತರಿಕವಾಗಿ ವಿಶ್ವವಿದ್ಯಾಲಯದಲ್ಲಿ ಇಂಟಲಿಜೆನ್ಸ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸಭೆಯು ತೀರ್ಮಾನಿಸಿದೆ ಎಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.