ರೈಲಿನ ಸಮಯ, ಸಂಪೂರ್ಣ ಮಾಹಿತಿ ಇಲ್ಲಿದೆ
ಪ್ರಗತಿವಾಹಿನಿ ಸುದ್ದಿ: ಶಬರಿಮಲೆಗೆ ತೆರಳುವ ಯಾತ್ರಾರ್ಥಿಗಳಿಗಾಗಿ ನೈಋತ್ಯ ರೈಲ್ವೆ ವಿಶ್ರ್ಷ ರೈಲು ಸೇವೆ ಆರಂಭಿಸಿದೆ. ಹುಬ್ಬಳ್ಳಿ-ಕೊಟ್ಟಾಯಂ ನಡುವೆ ನವೆಂಬರ್ 19 ರಿಂದ ಜನವರಿ 15ರವರೆಗೆ ಈ ವಿಶೇಷ ರೈಲು ಸಂಚರಿಸಲಿದೆ.
ವಿಶೇಷ ರೈಲಿನ ಜೊತೆ ಇನ್ಮುಂದೆ ವಾರಕ್ಕೊಮ್ಮೆ ಹೆಚ್ಚುವರಿ ರೈಲು ಸಹ ಹುಬ್ಬಳ್ಳಿಯಿಂದ ಸಂಚರಿಸಲಿರುವುದು ವಿಶೇಷ. ಹುಬ್ಬಳ್ಳಿ ಹಾಗೂ ಕೇರಳದ ಕೊಟ್ಟಾಯಂ ನಿಲ್ದಾಣಗಳ ನಡುವೆ 9 ಟ್ರಿಪ್ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆ ಒದಗಿಸಲಾಗುತ್ತದೆ.
ರೈಲು ಸಂಖ್ಯೆ 07371 ಎಸ್ಎಸ್ಎಸ್ ಹುಬ್ಬಳ್ಳಿ-ಕೊಟ್ಟಾಯಂ ವಿಶೇಷ ಎಕ್ಸ್ಪ್ರೆಸ್ ರೈಲು ನವೆಂಬರ್ 19 ರಿಂದ 2025ರ ಜನವರಿ 14ರವರೆಗೆ ಸಂಚರಿಸಲಿದೆ.
ರೈಲು ಸಂಖ್ಯೆ 07372 ಎಸ್ಎಸ್ಎಸ್ ಹುಬ್ಬಳ್ಳಿ-ಕೊಟ್ಟಾಯಂ ವಿಶೇಷ ಎಕ್ಸ್ಪ್ರೆಸ್ ರೈಲು ನವೆಂಬರ್ 20 ರಿಂದ 2025ರ ಜನವರಿ 15ರವರೆಗೆ ಸಂಚರಿಸಲಿದೆ.
ಹೆಚ್ಚುವರಿಯಾಗಿ ಹುಬ್ಬಳ್ಳಿ-ಕೊಟ್ಟಾಯಂ ನಡುವೆ ವಾರಕ್ಕೋಮ್ಮೆ ಒಂದು ವಿಶೇಷ ರೈಲು ಸಂಚರಲಿಸಲಿದೆ. ರೈಲು ಸಂಖ್ಯೆ 07371 ಹುಬ್ಬಳ್ಳಿ-ಕೊಟ್ಟಾಯಂ ವಾರಕ್ಕೊಮ್ಮೆ ವಿಶೇಷ ರೈಲು ಪ್ರತಿ ಮಂಗಳವಾರ ಮಧ್ಯಾಹ್ನ 3:15ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಟು ಮರುದಿನ ಬುಧವಾರ ಮಧ್ಯರಾತ್ರಿ 12ಕ್ಕೆ ಕೊಟ್ಟಾಯಂ ತಲುಪಲಿದೆ.
ರೈಲು ಸಂಖ್ಯೆ 07372 ಕೊಟ್ಟಾಯಂ-ಹುಬ್ಬಳ್ಳಿ ವಾರಕ್ಕೊಮ್ಮೆ ವಿಶೇಷ ರೈಲು ಪ್ರತಿ ಮಂಗಳವಾರ ಮಧ್ಯರಾತ್ರಿ 12:50ಕ್ಕೆ ಕೊಟ್ಟಾಯಂನಿಂದ ಹೊರಟು ಮರುದಿನ ಬುಧವಾರ ಮಧ್ಯಾಹ್ನ 03:00ಕ್ಕೆ ಹುಬ್ಬಳ್ಳಿ ತಲುಪಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ