Karnataka News

*ಎಸ್.ಎಸ್.ಎಲ್.ಸಿಯಲ್ಲಿ ಫೇಲ್ ಆಗಿದ್ದಕ್ಕೆ ಈತ ಏನು ಮಾಡಿದ್ದಾನೆ ನೋಡಿ… ಬಾಲಕನ ಕಥೆ ಕೇಳಿ ಶಾಕ್ ಆದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ: ಎಸ್.ಎಸ್.ಎಲ್,ಸಿಯಲ್ಲಿ ಫೇಲ್ ಆಗಿದ್ದಕ್ಕೆ ನೊಂದ ಬಾಲಕನೊಬ್ಬ ದೇವರ ವಿಗ್ರಹವನ್ನೇ ವಿರೂಪಗೊಳಿಸಿದ ಘಟನೆ ಬೆಂಗಳೂರಿನ ಜೀವನ್ ಭಿಮಾನಗರದಲ್ಲಿ ನಡೆದಿದೆ.

Home add -Advt

ಜೀವನ್ ಭೀಮಾನಗರದಲ್ಲಿ ಗುರುವಾರ ರಾತ್ರಿ ಕಿಡಿಗೇಡಿಗಳು ಲಕ್ಷ್ಮೀ ಭುವನೇಶ್ವರಿ ದೇವಿ ವಿಗ್ರಹ ವಿರೂಪಗೊಳಿಸಿದ್ದರು. ಈ ಬಗ್ಗೆ ಭಕ್ತರು ಹಾಗೂ ಸಾರ್ವಜನಿಕರು ಪೊಲಿಸರಿಗೆ ದೂರು ನೀಡಿದ್ದರು. ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದರು.

ಸಿಸಿಟಿವಿ ಕ್ಯಾಮರಾ ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರೇ ಆತನ ವಿಚಾರ ಕೇಳಿ ಶಾಕ್ ಆಗಿದ್ದಾರೆ. ಆರೋಪಿ ಅಪ್ರಾಪ್ತ ಬಾಲಕನಾಗಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ದೇವರ ಮೇಲೆ ಕೋಪಗೊಂಡು ಈ ರೀತಿ ಮಾಡಿದ್ದಾನಂತೆ.

ಬಾಲಕ ಲಕ್ಷ್ಮೀ ಭುವನೇಶ್ವರಿ ದೇವಿಯ ಭಕ್ತನಾಗಿದ್ದನಂತೆ ಆದರೆ ಪರೀಕ್ಷೆಯಲ್ಲಿ ಮೂರು ವಿಷಯಗಳಲ್ಲಿ ಫೇಲ್ ಆಗಿದ್ದಕ್ಕೆ ಬೇಸರಗೊಂಡು ದೇವರ ವಿಗ್ರಹವನ್ನೇ ವಿರೂಪಗೊಳಿಸಿ ತೆರಳಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.


Related Articles

Back to top button