*ಶಹಾಪೂರ ಹಾಗೂ ಗ್ರಾಮೀಣ ಪೊಲೀಸರ ಕಾರ್ಯಾಚರಣೆ: ಮಟಕಾ ಆಡುತ್ತಿದ್ದ ಇಬ್ಬರು ವಶಕ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಶಾಹಾಪೂರ ಠಾಣೆಯ ಪೊಲೀಸರು ಹಾಗೂ ಗ್ರಾಮೀಣ ಠಾಣೆಯ ಪೊಲೀಸರು ಮಟಕಾ ಅಡ್ಡೆ ಮೇಲೆ ದಾಳಿ ಮಾಡಿ, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಶಾಹಾಪೂರು ಪೊಲೀಸರು ದಾಳಿ ಮಾಡಿ ಅಭಿಷೇಕ@ ಚಿಮ್ಯಾ ರಾಮ ಆಂಜನೇಯಕರ (25) ಎಂಬಾತನನ್ನು ಬಂಧಿಸಿದ್ದಾರೆ. ಬಂದಿತ ಆರೋಪಿ ಖಾಸಬಾಗ ಸಾರ್ವಜನಿಕ ಮುಂಬೈ ಮಟಕಾ ಎಂಬ ಆಟದ ಮೇಲೆ ಸಾರ್ವಜನಿಕರಿಂದ ಹಣ ಹಚ್ಚಿಸಿಕೊಂಡು ಆಟದಲ್ಲಿ ತೊಡಗಿದ್ದಾಗ ಶಹಾಪೂರ ಠಾಣೆಯ ಪಿಎಸ್‌ಐ ಎಸ್. ಎನ್ ಬಸವಾ ಹಾಗೂ ಸಿಬ್ಬಂದಿ ದಾಳಿ ಮಾಡಿ, ಆರೋಪಿ ಸುರೇಶ ಗಣೇಶ ಜಾಲಗಾರ (36) ಎಂಬುವರಿಗರ ಸಂಗ್ರಹವಾದ ಹಣ ನೀಡುವುದಾಗಿ ತಿಳಿಸಿದ್ದರಿಂದ ಇಬ್ಬರೂ ಆರೋಪಿತರ ವಿರುದ್ಧ ಶಹಾಪೂರ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ.18/2026 ಕಲಂ.78(iii) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ
ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸ್‌ರಿಂದ ಮಟಕಾ ದಾಳಿ; ಆರೋಪಿ ವಶಕ್ಕೆ
ಬೆಳಗಾವಿಯ ಗ್ರಾಮೀಣ ಪೊಲೀಸರು ದಾಳಿ ಮಾಡಿ ಅಡಿವೆಪ್ಪ ದುರ್ಗಪ್ಪ ಕೊರವಿ (28)ಎಂಬಾತನ್ನು ಬಂಧಿಸಿದ್ದಾರೆ. ಆರೋಪಿ ಶಬರಿ ಕಾಲನಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕಲ್ಯಾಣ ಮಟಕಾ ಎಂಬ ಆಟದ ಮೇಲೆ ಸಾರ್ವಜನಿಕರಿಂದ ಹಣ ಹಚ್ಚಿಸಲು ಆಟದಲ್ಲಿ ತೊಡಗಿದ್ದಾಗ ಬೆಳಗಾವಿ ಗ್ರಾಮೀಣ ಠಾಣೆಯ ಪಿಐ ನಾಗನಗೌಡಾ ಕಟ್ಟಿಮನಿಗೌಡರ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ, ಆರೋಪಿತನ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ. 33/2026 ಕಲಂ.78(iii) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ.




