*ಹೈಸ್ಕೂಲು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ: ಪತ್ನಿ ಸಮಾಧಿ ಪಕ್ಕದಲ್ಲೇ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆಗೆ ಸಿದ್ಧತೆ*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ, ಕರ್ನಾಟಕ ರಾಅಜಕೀಯ ಭೀಷ್ಮ ಶಾಮನೂರು ಶಿವಶಂಕರಪ್ಪ ವಿಧಿವಶರಾಗಿದ್ದು, ಅವರ ಅಂತ್ಯಕ್ರಿಯೆ ಇಂದು ದಾವಣಗೆರೆಯಲ್ಲಿ ನಡೆಯಲಿದೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ಸಂಜೆ ಶಾಮನೂರು ಶಿವಶಂಕರಪ್ಪ(94) ನಿಧನರಾಗಿದ್ದರು. ತಡರಾತ್ರಿ ಅವರ ಪಾಅರ್ಥಿವ ಶರೀರವನ್ನು ದಾವಣಗೆರೆಗೆ ಕೊಂಡೊಯ್ಯಲಾಯಿತು. ಇಂದು ಬೆಳಿಗ್ಗೆ 7 ಗಂಟೆಗೆ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ನಿವಾಸಕ್ಕೆ ಶಾಮನೂರು ಅವರ ಪಾರ್ಥೀವ ಶರೀರ ತರಲಾಗಿದ್ದು, ಅಲ್ಲಿ ಮಧ್ಯಾಹ್ನದವರೆಗೂ ಧಾರ್ಮಿಕ ಹಾಗೂ ಅಂತಿಮ ವಿಧಿ-ವಿಧಾನಗಳು ನಡೆಯಲಿವೆ.
ಬಳಿಕ ಅಲ್ಲಿಂದ ದಾವಣಗೆರೆ ಹೈಸ್ಕೂಲು ಮೈದಾನಕ್ಕೆ ಪಾರ್ಥೀವ ಶರೀರ ತರಲಾಗುವುದು. ಅಲ್ಲಿ ಸಂಜೆ 4 ಗಂಟೆಯವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಬಳಿಕ ಸಂಜೆ ದಾವಣಗೆರೆಯ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಪತ್ನಿ ಪಾರ್ವತಮ್ಮ ಅವರ ಸಮಾಧಿಯ ಪಕ್ಕದಲ್ಲೇ ವೀರಶೈವ ಲಿಂಗಾಯಿತ ಸಂಪ್ರದಾಯದಂತೆ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆ ನೆರವೇರಲಿದೆ.




