Kannada NewsKarnataka NewsLatest

ಶಾಂತಿನಿಕೇತನ ಪಿಯು ಕಾಲೇಜಿನ ತಂಡ ಫುಟ್ ಬಾಲ್ ಕ್ರೀಡೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಪ್ರಗತಿವಾಹಿನಿ ಸುದ್ದಿ,  ಖಾನಾಪುರ: ಸ್ಥಳೀಯ ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮೀ ಶಿಕ್ಷಣ ಸಂಸ್ಥೆಯ ಶಾಂತಿನಿಕೇತನ ಮಹೇಶ ಪಿಯು ಕಾಲೇಜಿನ ಫುಟ್ಬಾಲ್ ತಂಡ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಜಯಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ ಎಂದು ಕಾಲೇಜಿನ ಸಂಸ್ಥಾಪಕ ವಿಠ್ಠಲ ಹಲಗೇಕರ ಹೇಳಿದರು.
ಶನಿವಾರ ಕಾಲೇಜಿನ ಸಭಾಗೃಹದಲ್ಲಿ ಸಾಧಕ ತಂಡವನ್ನು ಅಭಿನಂದಿಸಿ ಮಾತನಾಡಿದ ಅವರು, ಫುಟ್ ಬಾಲ್ ಕೋಚ್ ವಿನೀತ್ ಭಾಲೇರಾವ್, ಸುದೀಪ ಕಾಂಬಳೆ, ಸಾಗರ ಕೋಳೆಕರ, ಓಂಕಾರ ಗಾವಡೆ ಅವರ ಮಾರ್ಗದರ್ಶನದಲ್ಲಿ ಕಾಲೇಜಿನ ತಂಡ ರಾಜ್ಯಮಟ್ಟವನ್ನು ಜಯಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ಗ್ರಾಮೀಣ ಭಾಗದ ವಿದ್ಯಾಸಂಸ್ಥೆಯೊಂದರ ವಿದ್ಯಾರ್ಥಿಗಳು ನಗರ ಪ್ರದೇಶದಿಂದ ಬಂದ ನುರಿತ ತಂಡಗಳನ್ನು ಮಣಿಸಿ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದು, ತಮಗೆ ಹೆಮ್ಮೆ ತಂದಿದೆ ಎಂದು ಹೇಳಿದರು.
ಪ್ರಾಚಾರ್ಯ ಪ್ರಸಾದ ಪಾಲನಕರ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆಗೂ ಮಹತ್ವ ನೀಡಿದ್ದರ ಫಲವಾಗಿ ಕಾಲೇಜಿನ ಫುಟ್ ಬಾಲ್ ತಂಡ ಯಶಸ್ಸನ್ನು ಗಳಿಸಿದೆ. ಕಾಲೇಜಿನ ಆಡಳಿತ ಮಂಡಳಿಯವರೂ ತಂಡದ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ರಾಷ್ಟ್ರಮಟ್ಟದಲ್ಲೂ ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಗವರ್ನಿಂಗ್ ಸಮಿತಿಯ ಕಾರ್ಯದರ್ಶಿ ರಾಜೇಂದ್ರ ಪಾಟೀಲ, ಹಿರಿಯ ಉಪನ್ಯಾಸಕ ವಿಶಾಲ ಕರಂಬಳಕರ, ಫುಟ್ ಬಾಲ್ ಪಟುಗಳಾದ ತಂಡದ ನಾಯಕ ಮೌನೇಶ ಯಳ್ಳೂರ, ಉಪನಾಯಕ ಸಾಹಿಲ್ ಹುದಲಿ, ವೈಷ್ಣವ್ ಘಾಡಿ, ವೈಷ್ಣವ ದೇವಲತಕರ, ಶ್ರೀ ಪಾಟೀಲ, ಸ್ವರೂಪ ಬೆಳಗಾವಕರ, ಸುಶಾಂತ ಕದಮ್, ಯಶ್ ಮಾಳವೆ, ಸಚೀನ್ ಲಖಮೋಜಿ, ಕುಶಾಲ ತಳವಾರ, ಶ್ರೀಧರ ಬೆಳಗಾವಕರ, ಆರ್ಯನ್ ದೇಸಾಯಿ, ಸಿದ್ಧಾರ್ಥ ಪಾಟೀಲ, ಸಂಕಲ್ಪ ಪಾಟೀಲ ಮತ್ತಿತರರು ಇದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button