ಶಿರದವಾಡದಿಂದ ಬೇಡಕಿಹಾಳ ರಸ್ತೆ ಕಾಮಗಾರಿಗೆ 1.50 ಕೋಟಿ ರೂಪಾಯಿ ಮಂಜೂರು: ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಚಾಂದಶಿರದವಾಡ ಗ್ರಾಮದಲ್ಲಿ ಬೇಡಕಿಹಾಳದ ದೂಧಗಂಗಾ ಸೇತುವೆ ತಡೆಗೋಡೆ, ದುರುಸ್ಥಿ ಕಾಮಗಾರಿಗೆ ರಾಜ್ಯ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆಯವರ ಪ್ರಯತ್ನದಿಂದ ಲೋಕೋಪಯೋಗಿ ಇಲಾಖೆಯಿಂದ 1.50ಕೋಟಿ ರೂಪಾಯಿ ಮಂಜೂರಾಗಿದ್ದು ಕಾಮಗಾರಿಗೆ ಭೂಮಿ ಪೂಜೆ ಮಾಡಿ ಚಾಲನೆ ನೀಡಿದರು.
ಬಳಿಕ ಗಳತಗಾ ಗ್ರಾಮದಲ್ಲಿ ಪಂಚಾಯತ ರಾಜ ಇಂಜಿನಿಯರಿಂಗ ಇಲಾಖೆ ವತಿಯಿಂದ ಮಂಜುರಾದ 50 ಲಕ್ಷ ರೂ ಮೊತ್ತದಲ್ಲಿ ಗ್ರಾಮ ಪರಿಮಿತಿಯಲ್ಲಿ ರಸ್ತೆ ಸುಧಾರಣೆ ಹಾಗೂ ಕಾಲೋನಿಗಳಿಗೆ ಕೂಡುವ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದರು.
ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆಯವರು ” ಕಳೆದ ಎರಡು ವರ್ಷಗಳಿಂದ ಪ್ರವಾಹದಿಂದಾಗಿ ಬೇಡಕಿಹಾಳ-ಶಿರದವಾಡ ರಸ್ತೆ ಮದ್ಯದಲ್ಲಿರುವ ದೂಧಗಂಗಾ ಸೇತುವೆಯ ಎರಡೂ ಬದಿಗೆ ರಸ್ತೆಕೊಚ್ಚಿಕೊಂಡು ಹೋಗಿದ್ದರಿಂದ ಈ ಸೇತುವೆಯ ಎರಡೂ ಬದೆಗಿನ ಸಂರಕ್ಷಣೆ ಗೋಡೆಗಳು ಕುಸಿದಿದ್ದರಿಂದ ಅಪಘಾತ ಸಂಭವಿಸುವ ಸಮಸ್ಯೆ ಉಂಟಾಗಿತ್ತು ಸದರಿ ಸಮಸ್ಯೆಗೆ ಸ್ಪಂದಿಸಿದ ಸಚಿವರು ಎರಡೂ ಬದಿಗಿನ ತಡೆಗೋಡೆಗಳನ್ನು ನಿರ್ಮಿಸಲು ಹಣ ಮಂಜೂರಿ ಮಾಡಲಾಗಿದ್ದು ರಸ್ತೆ ಹಾಗೂ ತಡೆಗೋಡೆಗಳನ್ನು ದರ್ಜೆಯುತ ಕಾಮಗಾರಿ ಮಾಡಿ ಎಂದು ಸಚಿವರು ಗುತ್ತಿಗೆದಾರರಿಗೆ ಸೂಚಿಸಿದರು.
ಸಮಾರಂಭದಲ್ಲಿ ಅಣ್ಣಾ ಪಾಟೀಲ, ಅಶೋಕ ಪಾಟೀಲ, ವಿಶ್ವಾಸ ನಲವಡೆ,ಜಾವೇದ ಮುಜಾವರ,ನಾರಾಯಣ ಹಿರವೆ,ಸಂಜಯ ಪಾಟೀಲ, ಶೀತಲ ಲಡಗೆ,ಅಮರ ಕಾಂಬಳೆ,ಅಜಿತ ತೋಡಕರ ಅಜೀತ ತೋಡಕರ, ಶೀತಲ ಪಾಟೀಲ,ರವಿಂದ್ರ ಸ್ವಾಮಿ, ಅನೀಲ ಪೂಜಾರಿ ಉತ್ತಮ ಕಾಂಬಳೆ ವಿಠಲ ಬನ್ನೆ, ಶಿವಾಜಿ ರೂಪಾಳೆ, ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿಗೆ ಸಚಿವರ ಸ್ಪಂದನೆ; ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಿದ ಸಚಿವ ಗೋವಿಂದ ಕಾರಜೋಳ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ