Kannada NewsLatest

ಕಟ್ಟಡ ಹಾಗೂ ಪೌರ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿದ ಜೊಲ್ಲೆ ದಂಪತಿ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ನಿಪ್ಪಾಣಿ ಪಟ್ಟಣದ ನಿಪ್ಪಾಣಿ ಸಿ.ಬಿ.ಎಸ್.ಸಿ ಶಾಲಾ ಆವರಣದಲ್ಲಿ ಆಯೋಜಿಸಿದ ಕೋವಿಡ-19 ಪರಿಹಾರಾರ್ಥವಾಗಿ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ವತಿಯಿಂದ ಲೋಕ ಕಲ್ಯಾಣ ಕಟ್ಟಡ ಕಾರ್ಮಿಕರ ಸಂಘ ಯಕ್ಸಂಬಾ ಇದರ ಅಡಿಯಲ್ಲಿ ಜೊಲ್ಲೆ ಉದ್ಯೋಗ ಸಮೂಹದಿಂದ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಆಹಾರದ ಕಿಟ್ ವಿತರಿಸಿದರು.

ಈ ವೇಳೆ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ಪೌರ ಕಾರ್ಮಿಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಕೋರೊನಾ ಸಂಕಷ್ಟದಲ್ಲಿಯು ತಮ್ಮ ಜಿವದ ಹಂಗನ್ನು ತೋರೆದು ಸೇವೆ ಸಲ್ಲಿಸಿದ್ದಾರೆ  ಅವರ ಕಾರ್ಯ ಶ್ಲಾಘನಿಯ ಎಂದರು.

ನಿಪ್ಪಾಣಿ ನಗರದಲ್ಲಿ ಕಟ್ಟಡ ಕಾರ್ಮಿಕರಿಗೆ 426, ಪೌರ ಕಾರ್ಮಿಕರಿಗೆ 183, ವಾರ್ಡ ಕಾರ್ಮಿಕರಿಗೆ 1260, ಆಶಾ ಕಾರ್ಯಕರ್ತರಿಗೆ 26, ಅಂಗನವಾಡಿ ಶಿಕ್ಷಕಿಯರಿಗೆ 62, ಅಂಗನವಾಡಿ ಸಹಾಯಕಿಯರಿಗೆ 61 ಹೀಗೆ ಒಟ್ಟು 2018 ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು. ಈ ಕಿಟ್ ನಲ್ಲಿ ಅಕ್ಕಿ 3 ಕೆಜಿ, ಗೋಧಿ ಹಿಟ್ಟು 2 ಕೆಜಿ, ಅವಲಕ್ಕಿ 1 ಕೆಜಿ, ರವಾ 1 ಕೆಜಿ, ಸಕ್ಕರೆ 1 ಕೆಜಿ, ಅಡುಗೆ ಎಣ್ಣೆ 1 ಕೆಜಿ, ಉಪ್ಪು 1 ಕೆಜಿ, ಕಡಲೆ ಬೆಳೆ 1 ಕೆಜಿ, ಮಸಾಲೆ 200 ಗ್ರಾಂ, ಖಾರ 500ಗ್ರಾಂ ಒಳಗೊಂಡಿದೆ.

ನಂತರ ನೋದಾಯಿತ ಕಾರ್ಮಿಕರ ಮರಣದ ನಂತರ ವಾರಸದಾರರಿಗೆ ವಿಮಾ ಸೌಲಭ್ಯ ತಲಾ 54 ಸಾವಿರ 2 ಫಲಾನುಭವಿಗಳಿಗೆ 108000 ರೂ, ಮದುವೆ ಸಹಾಯಧನ 4 ಫಲಾನುಭವಿಗಳಿಗೆ 2 ಲಕ್ಷ ರೂ ಧನ ಸಹಾಯ ವಿತರಿಸಿದರು. ನಂತರ ಪೇಂಟರ್ ಕಾರ್ಮಿಕರಿಗೆ 21 ಟೂಲ್ ಕಿಟ್, ಬಾರ್ಬೆಂಡಿಂಗ್ ಕಾರ್ಮಿಕರಿಗೆ 6 ಟೂಲ್ ಕಿಟ್‌ಗಳನ್ನು ವಿತರಿಸಲಾಯಿತು. ಬಳಿಕ ಕಟ್ಟಡ ಕಾರ್ಮಿಕರ ಕುಟುಂಬದವರಿಗೆ ಸುರಕ್ಷಾ ಕಿಟ್‌ಗಳನ್ನು ವಿತರಿಸಲಾಯಿತು. ಇದರಲ್ಲಿ ಪುರುಷರು 710 ಹಾಗೂ ಮಹಿಳೆಯರು 470 ಒಟ್ಟು 1180 ಜನರಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಚಂದ್ರಕಾಂತ ಕೋಟಿವಾಲೆ, ಉಪಾಧ್ಯಕ್ಷರಾದ ಎಂ ಪಿ ಪಾಟೀಲ್, ಪುರಸಭೆ ಉಪಾಧ್ಯಕ್ಷರಾದ ನೀತಾ ಬಾಗಡಿ, ನಗರಸಭೆ ಸದಸ್ಯರು, ಎ.ಪಿ.ಎಮ.ಸಿ ಸದಸ್ಯರು, ಬಿಜೆಪಿ ನಗರ ಅಧ್ಯಕ್ಷರಾದ ಪ್ರಣವ ಮಾನವಿ, ವೈದ್ಯಾಧಿಕಾರಿ ಡಾ. ಸೀಮಾ ಗುಂಜಾಳ, ಸಿ.ಡಿ.ಪಿ.ಒ ಸುಮಿತ್ರಾ ಡಿ. ಬಿ, ಎ.ಪಿ.ಎಮ.ಸಿ ನಿರ್ದೇಶಕರಾದ ಬಂಡಾ ಘೋರ್ಪಡೆ, ನಗರಸಭೆ ಸದಸ್ಯರಾದ ವಿಭಾವರಿ ಕಾಂಡಕೆ, ದೀಪಾಲಿ ಗಿರಿ, ಸೋನಲ ಕೋಠಡಿಯಾ, ರಾಜು ಬೂಂದೆಶಾ, ಸಂತೋಷ ಸಾಂಗಾವಕರ, ಸಂತೋಷ ಮಾನೆ, ಆಶಾ ಟವಳೆ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
Breaking News- ಶಾಲೆ ಆರಂಭಕ್ಕೆ ಮಾರ್ಗಸೂಚಿ ಪ್ರಕಟ -ಇಲ್ಲಿದೆ ಸಮಗ್ರ ವಿವರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button