Kannada NewsKarnataka News

ಆಕೆ ಆತನ ಹೆಂಡತಿಯಾಗಿರಲಿಲ್ಲ… ಹಾಗಾದರೆ ಯಾರಾಕೆ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅಂಬೋಲಿ ಬಳಿ ಕಾರಿಗೆ ಬೆಂಕಿ ಹೊತ್ತಿಕೊಂಡು ಮಹಿಳೆ ಸಾವಿಗೀಡಾದ ಪ್ರಕರಣ ಈಗ ವಿಚಿತ್ರ ತಿರುವು ಪಡೆದುಕೊಂಡಿದೆ.

ಬೆಂಕಿಯಿಂದ ಗಂಭೀರ ಗಾಯಗೊಂಡು ಗೋವಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಕಾರು ಚಾಲನೆ ಮಾಡುತ್ತಿದ್ದ ದುಂಡಪ್ಪ ಪದ್ಮಣ್ಣವರ್ ಮೃತ ಮಹಿಳೆಯ ಪತಿಯಲ್ಲ. ಆತ ಆಕೆಯೊಂದಿಗೆ ರೆಸಾರ್ಟ್ ಗೆ ತೆರಳಿದ್ದ ಎನ್ನುವ ಮಾಹಿತಿ ಬಂದಿದೆ.

ಸುಟ್ಟು ಭಸ್ಮವಾದ ಮಹಿಳೆ ರಿಜ್ವಾನಾ (41) ಎನ್ನುವವಳಾಗಿದ್ದು, ಆಕೆ ಬೆಳಗಾವಿಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಳು ಎನ್ನಲಾಗಿದೆ. ಮಹಿಳೆಯ ಸಂಬಧಿಕರು ಇದೀಗ ಪ್ರಕರಣದ ಕುರಿತು ಸಂಶಯ ವ್ಯಕ್ತಪಡಿಸಿ ದೂರು ದಾಖಲಿಸಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕರಾಣ ದುಂಡಪ್ಪ ಪದ್ಮಣ್ಣವರ್ ವೈದ್ಯ. ಆದರೆ ಆಕೆಗೂ ಆತನಿಗೂ ಏನು ಸಂಬಂಧವಿತ್ತು? ಯಾವ ಕಾರಣದಿಂದ ಅವರು ಪ್ರಯಾಣಿಸಿದ್ದರು ಎನ್ನುವುದು ತನಿಖೆಯ ನಂತರವಷ್ಟೆ ತಿಳಿಯಬೇಕಿದೆ.

Home add -Advt

 

Belagavi Car Caught Afire Near Amboli Falls, Woman Inside Car Burnt Alive 

Related Articles

Back to top button