*ಅಭಿವೃದ್ಧಿ ಕಾಮಗಾರಿ ಬಗ್ಗೆ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಜೊತೆ ಚರ್ಚಿಸಿದ ಶೆಟ್ಟರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ಕೈಕೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಬೆಳಗಾವಿ ಚೇಂಬರ್ಸ್ ಅಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಜೊತೆ ಸಂಸದ ಜಗದೀಶ ಶೆಟ್ಟರ್ ಚರ್ಚೆ ನಡೆಸಿದರು.
ಇಂದು ಬೆಳಗಾವಿಯ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ( ಬಿಸಿಸಿಐ ) ಅಧ್ಯಕ್ಷರು ಮತ್ತು ಆಡಳಿತ ಕಮೀಟಿ ಸದಸ್ಯರನ್ನು ಭೇಟಿ ಮಾಡಿ, ಬೆಳಗಾವಿ ನಗರದಲ್ಲಿ ಕೈಕೊಳ್ಳಲಾಗುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಿದರು.
ಪ್ರಥಮವಾಗಿ ಬೆಳಗಾವಿ ಚೇಂಬರ್ ಆಫ್ ಕಾರ್ಮಸ್ ಮತ್ತು ಇಂಡಸ್ಟ್ರೀಸ್ ವತಿಯಿಂದ ಬೆಳಗಾವಿ – ಬೆಂಗಳೂರು ನಡುವೆ ವಂದೇ ಭಾರತ ಎಕ್ಸಪ್ರೆಸ್ ಸಂಚಾರ ಪ್ರಾರಂಭಿಸಿದಕ್ಕೆ ಸಂಸದರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
ಬಳಿಕ ಬೆಳಗಾವಿ ನಗರದಲ್ಲಿ ಉದ್ಯಮ ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿ, ಈಗಾಗಲೆ ಬೆಳಗಾವಿ-ಕಿತ್ತೂರು- ಧಾರವಾಡ ನಡುವೆ ನೂತನ ರೈಲು ಮಾರ್ಗ ನಿರ್ಮಾಣ ಪ್ರಕ್ರಿಯೆ ಅಂತಿಮ ಹಂತ ತಲುಪಿರುವ ಬಗ್ಗೆ ತಿಳಿಸಲಾಯಿತು ನಗರ ಸುತ್ತಲು ರಿಂಗ್ /ಬೈಪಾಸ್ ರಸ್ತೆ ನಿರ್ಮಾಣ ಹಾಗೂ ವಿಮಾನಯಾನ ಅಭಿವೃದ್ಧಿ ಕುರಿತು ನಡೆಸಲಾಗುತ್ತಿರುವ ಕಾಮಗಾರಿಗಳ ಸ್ಥಿತಿಗತಿಯ ಬಗ್ಗೆ ಬಿಸಿಸಿಐ ಆಡಳಿತ ಮಂಡಳಿ ಸದಸ್ಯರಿಗೆ ಇದೆ ಸಂದರ್ಭದಲ್ಲಿ ತಿಳಿಸಿದರು. ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಶ್ರಮ ವಹಿಸಿ ಬೆಳಗಾವಿ ಉಧ್ಯಮಿಕರಣಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಪ್ರಭಾಕರ ನಾಗರಮುನ್ನೋಳಿ,ಸ್ವಪ್ಟಿಲ್ ಶಹಾ, ಕಾರ್ಯದರ್ಶಿಗಳು ಸತೀಶ ಕುಲಕರ್ಣಿ, ಜಂಟಿ ಕಾರ್ಯದರ್ಶಿಗಳು ಮನೋಜ ಮತ್ತಿಕೊಪ್ಪ ಸಂಜಯ ಪೋತದಾರ, ಆನಂದ ದೇಸಾಯಿ, ಶ್ರಧರಗಶೆಟ್ಟಿ, ಕಪಾಡಿಯಾ, ವಿಕ್ರಮ ಜೈನ್ ಗುರವ್ ಮತ್ತು ಎಂ. ಕೆ ಹೆಗಡೆ ಇವರು ಹಾಜರಿದ್ದರು.