ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜನಸಂಘ ಕಾಲದಿಂದಲೂ ಭಾರತೀಯ ಜನತಾ ಪಾರ್ಟಿಯನ್ನು ಕಟ್ಟಿ ಬೆಳೆಸಿರುವ ಮನೆತನ ಜಗದೀಶ್ ಶೆಟ್ಟರ್ ಅವರದ್ದು. ಅಂತವರು ಇಂದು ಪಕ್ಷ ತ್ಯಾಗ ಮಾಡಬೇಕಾದ ಸ್ಥಿತಿ ಬಂದಿರುವುದು ಬೇಸರ ತರಿಸಿದೆ ಎಂದು ಮಾಜಿ ಸಂಸದ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಪ್ರತಿಕ್ರಿಯಿಸಿದ್ದಾರೆ.
ಪ್ರಗತಿವಾಹಿನಿಯೊಂದಿಗೆ ಮಾತನಾಡಿದ ಅವರು, ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದೇ ಲಿಂಗಾಯತರು. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಬೆಳೆಸುವಲ್ಲಿ ಶೆಟ್ಟರ್ ಪಾತ್ರ ಅತ್ಯಂತ ಪ್ರಮುಖವಾಗಿದೆ. ಆದರೆ ಅವರಿಗೆ ಯಾವ ಕಾರಣದಿಂದ ಟಿಕೆಟ್ ನಿರಾಕರಿಸಲಾಯಿತು ನನಗೆ ಮಾಹಿತಿ ಇಲ್ಲ. ಪಕ್ಷ ಹೊಸ ಹೊಸ ಪ್ರಯೋಗ ಮಾಡುತ್ತಿದೆ. ಅದರ ಪರಿಣಾಮ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಆದರೆ ಶೆಟ್ಟರ್, ಸವದಿಯಂತಹ ನಾಯಕರು ಪಕ್ಷ ಬಿಡುತ್ತಿರುವುದು ಬೇಸರದ ಸಂಗತಿ ಎಂದು ಕೋರೆ ತಿಳಿಸಿದ್ದಾರೆ.
ಶೆಟ್ಟರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದೆ. ಅವರ ಮನವೊಲಿಸಲು ಹೋಗಬೇಕೆಂದಿದ್ದೆ. ಆದರೆ ಬೆಂಗಳೂರಿಗೆ ಹೊರಟಿರುವುದಾಗಿ ತಿಳಿಸಿದರು. ನಿಮ್ಮಂತವರು ಪಕ್ಷ ಬಿಡುವುದು ಸರಿ ಎನಿಸುವುದಿಲ್ಲ ಎಂದು ಅವರಿಗೆ ಹೇಳಿದೆ. ಇದು ದುರ್ದೈವ ಎಂದು ಕೋರೆ ಬೇಸರಪಟ್ಟುಕೊಂಡರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ