Latest

ಕೊಟ್ಟ ಮಾತಿಗೆ ತಪ್ಪಿದ ಬಿಜೆಪಿ ಸರ್ಕಾರ, ಶಿಗ್ಗಾವಿ ಚಲೋಕ್ಕೆ ನಿರ್ಧಾರ – ಶ್ರೀಶೈಲ ಅಂಗಡಿ

ಪ್ರಗತಿವಾಹಿನಿ ಸುದ್ದಿ; ಮುಗಳಖೋಡ: ಬಿಜೆಪಿ ಸರ್ಕಾರವು ಕೊಟ್ಟ ಮಾತನ್ನು ತಪ್ಪುತ್ತಿದ್ದು, ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡುವುದಕ್ಕೆ ಭರವಸೆ ನೀಡಿತ್ತು. ಆ ಭರವಸೆಯು ಭರವಸೆಯಾಗಿಯೇ ಉಳಿದಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕೊಟ್ಟ ಮಾತಿಗೆ ತಪ್ಪಿ ನಡೆಯುತ್ತಿದ್ದಾರೆ ಎಂದು ಪಟ್ಟಣದ ಪಂಚಮಸಾಲಿ ಸಮಾಜದ ಮುಖಂಡರಾದ ಶ್ರೀಶೈಲ ಅಂಗಡಿ ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅವರು ಸೆ.18 ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅಖಂಡ ಕರ್ನಾಟಕದ ಲಿಂಗಾಯತ ಪಂಚಮಸಾಲಿ ಸಮಾಜದ ಎಲ್ಲ ಬಾಂಧವರು ಸೆ.20 ಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಮನೆಗೆ ಮುತ್ತಿಗೆ ಹಾಕುವ ನಿಮಿತ್ತ ಶಿಗ್ಗಾವಿ ಚಲೋ… ಪ್ರತಿಭಟನೆಗೆ ಕರೆ ನಿಡಿದರು. ಘನ ಸರ್ಕಾರದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಶಾಸಕರೇ ಬಹುಸಂಖ್ಯೆಯಲ್ಲಿ ಇದ್ದು, ಸಿಎಂ. ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಲು ಲಿಂಗಾಯತ ಪಂಚಮಸಾಲಿ ಸಮಾಜದ ಶಾಸಕರೆ ಮುಖ್ಯ ಕಾರಣ, ಆದ್ದರಿಂದ ಮುಖ್ಯಮಂತ್ರಿಯವರು 2ಎ ಮೀಸಲಾತಿಯನ್ನು ಘೋಷಣೆ ಮಾಡಿ, ಸಮಾಜದ ಋಣ ತೀರಿಸಬೇಕಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬಹುಕೋಟಿ ಜನಸಂಖ್ಯೆ ಹೊಂದಿರುವ ಲಿಂಗಾಯತ ಪಂಚಮಸಾಲಿ ಸಮಾಜದ ಬೇಡಿಕೆಗೆ ಸ್ಪಂದಿಸುವುದು 224 ಶಾಸಕರ ಕರ್ತವ್ಯವಾಗಿದೆ ಮತ್ತು ಇದು ಎಲ್ಲ ಶಾಸಕರಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಕಿಡಿ ಕಾರಿದರು.

ಸಮಾಜದ ಹಿರಿಯರು, ರೈತ ಮುಖಂಡರಾದ ಸುರೇಶ ಹೊಸಪೇಟೆ ಇವರು ಮಾತನಾಡುತ್ತಾ, ವಿಜಯಪುರ ಶಾಸಕ ಬಸವರಾಜ್ ಪಾಟೀಲ ಯತ್ನಾಳ ಇವರು ಇದಿಗ ನಡೆಯುತ್ತಿರುವ ಅಧಿವೇಶನದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ 2ಎ ಮೀಸಲಾತಿಗಾಗಿ ಧ್ವನಿ ಎತ್ತುತ್ತಿದ್ದು ಅವರೊಂದಿಗೆ ಎಲ್ಲ ಶಾಸಕರು ಬೆಂಬಲ ಸೂಚಿಸಬೇಕು.

ಒಂದು ವೇಳೆ ಬೆಂಬಲಿಸದ ಶಾಸಕರಿಗೆ ತಕ್ಕಪಾಠ ಕಲಿಸಲು ಲಿಂಗಾಯತ ಪಂಚಮಸಾಲಿ ಸಮಾಜದ ಪ್ರಥಮ ಜಗದ್ಗುರು ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಬರುವ ಅಕ್ಟೊಬರ್ 23 ರಂದು ವೀರರಾಣಿ ಕಿತ್ತೂರು ಚನ್ನಮ್ಮ ಜಿಯವರ ಜಯಂತಿ ಉತ್ಸವ ನಿಮತ್ಯ ಬೆಂಗಳೂರಿನ ವಿಧಾನಸೌದದ ಮುಂದೆ 25 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಬೃಹತ್ ಸಮೂಹದಲ್ಲಿ 2 ಎ ಮೀಸಲಾತಿಗಾಗಿ ಪ್ರತಿಭಟನೆ ಮಾಡಿ, ಬೆಂಬಲ ಸೂಚಿಸದ ಸಚಿವರು, ಎಲ್ಲ ಶಾಸಕರುಗಳಿಗೆ ಮುಂಬರುವ ವಿಧಾನಸಭೆಯ ಚುನಾವಣೆಯಲ್ಲಿ ಅಂತವರನ್ನು ಸೊಲಿಸುವುದೆ ನಮ್ಮ ಸಮಾಜದ ಗುರಿಯಾಗಿರುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಶಿವಬಸು ಕಾಪಸಿ, ಗುತ್ತಿಗೆದಾರ ಸುರೇಶ ಜಂಬಗಿ, ಸುರೇಶ ಹೊಸಪೇಟೆ, ಮಹಾದೇವ್ ಮಗದುಮ, ಶ್ರೀಶೈಲ ಅಂಗಡಿ, ಸಿದ್ದಪ್ಪ ಅಂಗಡಿ, ಯಲ್ಲಪ್ಪ ಅಂಗಡಿ, ಪ್ರಕಾಶ ಹಾಲಳ್ಳಿ, ಕರೆಪ್ಪ ಹೊಸಪೇಟೆ, ಗಿರೀಶ ಕ್ಯಾಬಾನಿ, ನಾಗಪ್ಪ ಹುಕ್ಕೇರಿ, ಗುರುಪಾದ ಮರಡಿ ಮತ್ತಿತರರು ಇದ್ದರು.

ಶಿರಸಿ: ವಿದ್ಯುತ್ ಹರಿದು ಮಹಿಳೆ ಸಾವು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button