Latest

ವಾಟ್ಸಪ್ ಡಿಪಿಯಲ್ಲಿ ಶಿವನ ಫೋಟೋ; ಪಕ್ಕಾ ಉತ್ತರ ಕರ್ನಾಟಕ ಶೈಲಿಯ ಮಾತು; ಹಿಂದೂ ಎಂಬಂತೆ ಬಿಂಬಿಸಿಕೊಂಡಿದ್ದ ಶಂಕಿತ ಉಗ್ರ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಂಕಿತ ಉಗ್ರ ಶಾರಿಕ್ ನ ಖತರ್ನಾಕ್ ಐಡಿಯಾಗಳು ಪೊಲೀಸರನ್ನು ಮಾತ್ರವಲ್ಲ ಸ್ವತ: ಮೊಬೈಲ್ ರಿಪೇರಿ ಕೇಂದ್ರದವರನ್ನು ಬೆಚ್ಚಿ ಬೀಳಿಸಿದೆ.

ತನ್ನ ಬಗ್ಗೆ ಕಿಂಚಿತ್ತೂ ಅನುಮಾನ ಬಾರದಂತೆ ಹಿಂದೂ ವ್ಯಕ್ತಿ ಎಂಬಂತೆ ತನ್ನನ್ನು ಬಿಂಬಿಸಿಕೊಂಡಿದ್ದ ಶಾರಿಕ್ ತನ್ನ ಮೊಬೈಲ್ ವಾಟ್ಸಪ್ ಡಿಪಿಯಲ್ಲಿ ಶಿವನ ಫೋಟೋ ಹಾಕಿದ್ದ. ಹಿಂದೂ ಹೆಸರಲ್ಲಿದ್ದ ನಕಲಿ ಆಧಾರ್ ಕಾರ್ಡ್, ನಕಲಿ ವಿಳಾಸವಿರುವ ಹುಬ್ಬಳ್ಳಿ ಅಡ್ರೆಸ್ ನೀಡಿ ಮೈಸೂರಿನಲ್ಲಿ ಮನೆ ಬಾಡಿಗೆ ಪಡೆದಿದ್ದ. ಮಾತ್ರವಲ್ಲ ಮೊಬೈಲ್ ರಿಪೇರಿ ತರಬೇತಿಗೆ ಸೇರ್ಪಡೆಯಾಗಿದ್ದ.

ಕೆ.ಆರ್.ಮೊಹಲ್ಲಾದಲ್ಲಿರುವ ಎಸ್ ಎಂ ಎಂ ಮೊಬೈಲ್ ರಿಪೇರಿ ತರಬೇತಿ ಕೇಂದ್ರದಲ್ಲಿ ಶಾರಿಕ್ ಮೊಬೈಲ್ ರಿಪೇರಿ ತರಬೇತಿ ಪಡೆಯಲು ಸೇರಿದ್ದ. ತಾನು ಧಾರವಾಡ ಮೂಲದವನು ಪ್ರೇಮ್ ರಾಜ್ ಎಂದು ಹೇಳಿದ್ದ. ಅಲ್ಲದೇ ದಾಖಲೆಯಲ್ಲಿಯೂ ಪ್ರೇಮ್ ರಾಜ್ ಎಂದೇ ನೀಡಿದ್ದ. ತನಗೆ ಮೈಸೂರಿನ ಕಾಲ್ ಸೆಂಟರ್ ನಲ್ಲಿ ಉದ್ಯೋಗ ಸಿಕ್ಕಿದ್ದು, ಇನ್ನೂ 20 ದಿನ ಸಮಯವಿದೆ. ಹಾಗಾಗಿ ಆ ಸಮಯದಲ್ಲಿ ಮೊಬೈಲ್ ರಿಪೇರಿ ತರಬೇತಿ ಕಲಿಯಬೇಕೆಂದುಕೊಂಡಿದ್ದೇನೆ ಎಂದು ಮೊಬೈಲ್ ರಿಪೇರಿ ಕೇಂದ್ರ ಸೇರಿದ್ದ ಎಂದು ಕೇಂದ್ರದ ಮುಖ್ಯಸ್ಥ ಪ್ರಸಾದ್ ತಿಳಿಸಿದ್ದಾರೆ.

ಪಕ್ಕಾ ಉತ್ತರ ಕರ್ನಾಟ ಶೈಲಿ ಕನ್ನಡದಲ್ಲೇ ಆತ ಮಾತನಾಡುತ್ತಿದ್ದ. ವೇಷ ಭೂಷಣದಲ್ಲಾಗಲಿ, ಬಟ್ಟೆಯಲ್ಲಾಗಲಿ, ಮಾತಿನಲ್ಲಾಗಲಿ ಎಲ್ಲೂ ಆತ ಮುಸ್ಲಿಂ ಎಂಬುದೇ ಗೊತ್ತಾಗುತ್ತಿರಲಿಲ್ಲ. ಕಿಂಚಿತ್ತೂ ಅನುಮಾನ ಬಾರದಂತೆ ನಡೆದುಕೊಂಡಿದ್ದ. ಈಗ ಕುಕ್ಕರ್ ಬಾಂಬ್ ಸ್ಫೋಟಿಸಿದ್ದು ಆತ. ಅವನ ಹೆಸರು ಶಾರಿಕ್ ಎಂಬುದು ಕೇಳಿ ಶಾಕ್ ಆಗಿದೆ ಎಂದು ತಿಳಿಸಿದ್ದಾರೆ.

Home add -Advt

ಇದೇ ಮೊದಲ ಬಾರಿಗೆ ಮಹಾರಾಷ್ಟ್ರಕ್ಕೆ ಸಿಎಂ ಬೊಮ್ಮಾಯಿ ಮಾಸ್ಟರ್ ಸ್ಟ್ರೋಕ್!

https://pragati.taskdun.com/cm-basavaraj-bommaijath-talukukarnatakamaharashtra-kannada-school/

Related Articles

Back to top button