ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇವರು ಶಿಲ್ಪಾ ಯಕ್ಕೇರಿಮಠ, ಸಂಶೋಧನಾ ವಿದ್ಯಾರ್ಥಿ ಕೆಎಲ್‌ಎಸ್ ಗೋಗಟೆ ಇನ್ಸಿಟ್ಯುಟ ಆಫ್ ಟೆಕ್ನಾಲಜಿ ಬೆಳಗಾವಿ ಇವರಿಗೆ ಅವರ ಸಂಶೋಧನಾ ಪ್ರಬಂಧ “ಸರ್ಫೇಸ್ ವಾಟರ್ ಕ್ವಾಲಿಟಿ ಇವ್ಯಾಲ್ವೇಷನ್ ಆಂಡ್ ಅಡ್ವಾರ್ಪ್ಟನ್ ಕ್ಯಾರೆಕ್ಟರಿಸ್ಟಿಕ್ಸ್ ಆಫ್ ಸ್ವಾಯಿಲ್ ಇನ್ ಪಾರ್ಟ್ಸ್ ಆಫ್ ಪಂಚಗಂಗಾ ರಿವರ್ “ಕ್ಕಾಗಿ ಪಿಹೆಚ್‌ಡಿ ಪದವಿ ಪ್ರಧಾನ ಮಾಡಿರುತ್ತಾರೆ.
ಶಿಲ್ಪಾ ಯಕ್ಕೇರಿಮಠ ಇವರು ಡಾ. ಸಂಜಯಕುಮಾರ ವಿ ದಿವೇಕರ ಹಾಗೂ ಡಾ.ರವಿರಾಜ ಎಮ್ ಕುಲಕರ್ಣಿ, ಕೆಮಿಸ್ಟ್ರಿ ವಿಭಾಗ, ಕೆಎಲ್‌ಎಸ್, ಗೋಗಟೆ ಇನ್‌ಸ್ಟಿಟ್ಯುಟ್ ಆಫ್ ಟೆಕ್ನಾಲಜಿ ಬೆಳಗಾವಿ ಇವರ ಮಾರ್ಗದರ್ಶನದ ಅಡಿ ಕೈಕೊಂಡಿರುತ್ತಾರೆ. ಡಾ. ಬಿ ಕೆ ಪುರಂದರ, ಸೈಂಟಿಸ್ಟ (ನಿವೃತ್ತ) ನ್ಯಾಶನಲ್ ಇನ್ಸಿಟ್ಯುಟ ಆಫ್ ಹೈಡ್ರಾಲಜಿ, ಬೆಳಗಾವಿ ಇವರು ಕೂಡ ತಮ್ಮ ಮಾರ್ಗದರ್ಶನವನ್ನು ನೀಡಿರುತ್ತಾರೆ.
ಶಿಲ್ಪಾ ಯಕ್ಕೇರಿಮಠ. ಇವರು ಮೂಲತಃ ಸವದತ್ತಿಯವರಾಗಿದ್ದು, ಪ್ರಸ್ತುತ ಶ್ರೀ ಸಿ ಬಿ ಹಿರೇಮಠ ಅಧೀಕ್ಷಕ ಇಂಜನೀಯರರು (ನಿವೃತ್ತ) ಇವರ ಕುಟುಂಬ ಸದಸ್ಯರಾಗಿ ಬೆಳಗಾವಿಯಲ್ಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ