Belagavi NewsBelgaum NewsKannada NewsKarnataka News

*ಮಲತಾಯಿ ಜೊತೆ ವಾಸವಿದ್ದ ಮಗು ಸಾವು: ಕೊಲೆ ಶಂಕೆ*

ಪ್ರಗತಿವಾಹಿನಿ ಸುದ್ದಿ:  ಕೆಲ ವರ್ಷದ ಹಿಂದೆ ತಾಯಿ ತೀರಿ ಹೋಗಿದ್ದರು. ಆದರೆ ಈಗ ಮಲತಾಯಿ ಹಾಗೂ ತಂದೆ ಆಸರೆಯಲ್ಲಿ ಬೆಳೆಯುತ್ತಿದ್ದ ಮೂರು ವರ್ಷದ ಮಗು ಕೂಡ ತೀರಿಹೋಗಿದೆ. ಮಗುವಿನ ಅಜ್ಜ ಅಜ್ಜಿ ಮಗುವನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Home add -Advt

ಪರಕನಟ್ಟಿಯ ರಾಯಣ್ಣ ಹಂಪನ್ನವರ್ ಐದು ವರ್ಷದ ಹಿಂದೆ ಭಾರತಿ ಹಂಪನ್ನವರ್ ಎಂಬ ಕಡೋಲಿಯ ಕನ್ಯೆಯೊಂದಿಗೆ ಮದುವೆ ಆಗಿದ್ದ. ಇವರಿಗೆ ಹೆಣ್ಣು ಮಗು ಜನಿಸಿತ್ತು. ಆದರೆ ಕೆಲ ವರ್ಷಗಳ ಹಿಂದೆ ಭಾರತಿ ಹಂಪನ್ನವರ್ ತೀರಿ ಹೋದ್ರು. ಇದಾದ ಬಳಿಕ ರಾಯಣ್ಣ, ಬೇರೆಯ ಮದುವೆಯಾಗಿದ್ದಾರೆ. ಆದರೆ ಮೊದಲ ಹೆಂಡತಿಗೆ ಜನಿಸಿದ್ದ, ಹೆಣ್ಣು ಮಗುವನ್ನು ತಮ್ಮ ಎರಡನೇ ಹೆಂಡತಿಯೊಂದಿಗೆ ಪೋಷಿಸುತ್ತಿದ್ದರು.

ತಾವು ಮಹಾರಾಷ್ಟ್ರದ ನಾಗಪುರದಲ್ಲಿ ನೌಕರಿ ಮಾಡುತ್ತಿದ್ದರು ಕೂಡ ಬೆಳಗಾವಿ ನಗರದ ಕಂಗ್ರಾಳಿ ಕೆ. ಎಚ್. ನಲ್ಲಿ ಮನೆ ಮಾಡಿದ್ದರು. ಆದ್ರೆ ಮಗು ಸಮೃದ್ಧಿ ಹಂಪನ್ನವರ್ (3) ಅನಾರೋಗ್ಯಕ್ಕೆ ಈಡಾಗಿತ್ತು. ಮಗುವನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಭಾರತಿ ಹಂಪನ್ನವರ್ ಅವರ ತಂದೆ ತಾಯಿಗಳಿಗೆ ಮಾಹಿತಿ ನೀಡಲಾಯಿತು. ಕೂಡಲೇ ಮನೆಯವರು ಕಡೋಲಿಯಿಂದ ಬೆಳಗಾವಿ ಜಿಲ್ಲಾಸ್ಪತ್ರೆಗೆ ಬಂದು ನೋಡಿದಾಗ ಮಗು ಕೊನೆ ಉಸಿರೆಳೆದಿತ್ತು.

ಇನ್ನು ಮೊದಲು ನನ್ನ ಮಗಳನ್ನು ಕೊಂದ ರಾಯಣ್ಣ ಹಂಪಣ್ಣವರ ಈಗ ಎರಡನೇ ಹೆಂಡತಿಯೊಂದಿಗೆ ಸೇರಿ ನನ್ನ ಮೊಮ್ಮಗಳನ್ನು ಕೂಡ ಕೊಂದಿದ್ದಾನೆ. ಅವನಿಗೆ ಹಾಗೂ ಅವನ ಮನೆಯವರಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಸಮೃದ್ಧಿ ಅಜ್ಜಿ ರೇಣುಕಾ ಹಂಪಣ್ಣವರ ಒತ್ತಾಯಿಸಿದ್ದಾರೆ. 

ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ತನಿಖೆ ಬಳಿಕವೇ ಸತ್ಯಾಂಶ ಹೊರ ಬರಲಿದೆ.

Related Articles

Back to top button