ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಗೆ ಸಮೀಪದ ಕೆ ಕೆ ಕೊಪ್ಪ ಗ್ರಾಮದ ಶ್ರೀ ಸಿದ್ಧ ಶಿವಯೋಗೇಶ್ವರ ಮಠದಲ್ಲಿ ಶ್ರೀ ಶಿವಯ್ಯ ಸ್ವಾಮಿಜೀಯವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀ ಸಿದ್ಧಪ್ರಭು ಮಹಾ ಸ್ವಾಮಿಗಳ ಸಾನಿಧ್ಯದಲ್ಲಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಹಗಲಿರುಳು ತಮ್ಮ ಅವಿರತ ಸೇವೆಗಳನ್ನು ಸಲ್ಲಿಸುತ್ತಿರುವ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ರೇಷನ್ ಕಿಟ್ ಗಳನ್ನು ವಿತರಿಸಲಾಯಿತು.
ಈ ರೇಷನ್ ಕಿಟ್ ಗಳನ್ನು ವಿತರಿಸಿದ ಸುರೇಶ ಕಂಬಿ, ಕೊರೊನಾ ವಾರಿಯರ್ಸ್ ಗಳ ಸೇವೆ ಅತ್ಯಮೂಲ್ಯವಾಗಿದ್ದು ಅವರ ಸೇವೆ ಯಾವತ್ತಿಗೂ ಶ್ಲಾಘನೀಯ ಎಂದರು.
ಶಿವನಗೌಡ ಪಾಟೀಲ, ಡಾ. ಎಮ್ ಟಿ ಪಾಟೀಲ ಹಾಗೂ ಸೋಮಯ್ಯ ಕಂಬಿ ಅವರಿಗೆ ಧನ್ಯವಾದಗಳನ್ನು ಹೇಳಿದರು. ಇದೇ ಸಂದರ್ಭದಲ್ಲಿ ಮಠದ ಪರವಾಗಿ ಅನ್ನದಾಸೋಹ ಸೇವೆಯನ್ನು ಕೂಡ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮೃಣಾಲ್ ಹೆಬ್ಬಾಳಕರ, ಮೋಹನ ಚ ಅಂಗಡಿ, ದುಂಡಯ್ಯ ಪೂಜೇರ, ಯಲ್ಲಶೆಟ್ಟಿ ಗಾಣಗೆ, ಸುರೇಶ ಕುಡೇನಟ್ಟಿ, ಗಂಗಯ್ಯ ಕಂಬಿ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ