Latest

ವಿನೂತನ ಕಲೆಯ ಆಗರ ಶಿವಭೋಧ ಮಠಪತಿ

ಪ್ರಗತಿವಾಹಿನಿ ಸುದ್ದಿ; ಕಲಾ ಪ್ರಕಾರಗಳಲ್ಲಿ ಒಂದಾಗಿರುವ ಚಿತ್ರಕಲೆ ಒಂದು ರೀತಿಯಲ್ಲಿ ಸಾಗರ. ಅದರ ವಿಸ್ತಾರ ಊಹೆಗೂ ನಿಲುಕದ್ದು. ಚಿತ್ರಕಲೆ ಹುಟ್ಟಿದ್ದು, ಅದು ಬೆಳೆದು ಬಂದ ಹಾದಿಯನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಇಂತಹ ಕಲೆಯಲ್ಲಿ ತೊಡಗಿದವರು ಶಿವಭೋಧ ಮಠಪತಿ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ನಿವಾಸಿಯಾದ ಇವರು ಕಲೆಯನ್ನೇ ತಮ್ಮ ವೃತ್ತಿಯನ್ನಾಗಿಸಿ ಕೊಂಡಿದ್ದಾರೆ.

ಮಧ್ಯಮವರ್ಗದ ಮನೆಯಲ್ಲಿ ಹುಟ್ಟಿದಂತ ಇವರು ಆಯ್ಕೆಮಾಡಿದ್ದು ಕಲೆ ಮಾತ್ರ ಚಿಕ್ಕಂದಿನಿಂದಲೂ ಕಲೆಯನ್ನೇ ತಮ್ಮ ಆಟ ಮಾಡಿಕೊಂಡವರು. ತಮ್ಮ ಕಲೆಯನ್ನು ವಿಸ್ತಾರ ಗೊಳಿಸಬೇಕು ಎಂಬ ಆಸೆಯಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಗದುಗಿನ ತೋಂಟದಾರ್ಯ ಮಠದಲ್ಲಿ ವಿದ್ಯಾಭ್ಯಾಸ ಕೈಗೊಂಡು ಸ್ನಾತಕೋತ್ತರ ಪದವಿಯನ್ನು ಪಡೆದರು,ಇವರ ಅದ್ಭುತವಾದ ಕಲೆಗೆ ಬೆಂಗಳೂರಿನ ದಿ ಅಸೋಶಿಯೇಶನ್ ಅಫ್ ಪೀಪಲೆ ವಿತ್ ಡಿಸೆಬಿಲಿಟಿ( ಎಪಿಡಿ) ಸಂಸ್ಥೆಯವರು ಇವರನ್ನು ಆಯ್ಕೆ ಮಾಡಿಕೊಂಡರು.

ತಮ್ಮ ವಿನೂತನ ಚಿತ್ರ ಕಲೆಯ ಸೇವೆಗೆ ಅನೇಕ ಪ್ರಶಸ್ತಿಗಳು ಇವರ ಕೈ ಸೇರಿದವು ಅನೇಕ ಸಂಘ-ಸಂಸ್ಥೆಗಳು ಇವರನ್ನು ಅಭಿನಂದಿಸಿದರು, ಸುಮಾರು ಎರಡು ಸಾವಿರಕ್ಕಿಂತ ಹೆಚ್ಚು ಅಂಗವಿಕಲ ವಿದ್ಯಾರ್ಥಿಗಳಿಗೆ ಚಿತ್ರಕಲೆಯನ್ನು ಕಲಿಸಿದ ಗುರುಗಳು ಇವರುಪ್ರತಿಯೊಂದು ಮಗುವೂ ಒಬ್ಬ ಶ್ರೇಷ್ಠ ಕಲಾವಿದ. ಚಿತ್ರಗಳು ಮಕ್ಕಳ ಭಾಷೆ ಅವರಿಗೆ ಮೊದಲು ಬರುವುದೇ ಚಿತ್ರಕಲೆ ಅನಂತರ ಬರಹ ಚಿತ್ರ ಬಿಡಿಸುವದು ಅವರಿಗೆ ಆನಂದ. ನಮ್ಮ ಸಮಾಜದ ಎಲ್ಲ ವರ್ಗಗಳ ಪ್ರತಿಶತ 80 ಮಕ್ಕಳು ಇಷ್ಟಪಡುವ ಅದಕ್ಕಿಂತಲೂ ಹೆಚ್ಚು ಸಮಯವನ್ನು ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳಲು ಹೆಚ್ಚಿಸುವುದನ್ನು ಕಾಣಬಹುದು.

ಚಿತ್ರಕಲೆಯು ಶಿಶುಗಳ ರಚನಾ ಸಾಮರ್ಥ್ಯದ ಬೆಳವಣಿಗೆಗೆ ಭಾವಾಭಿವ್ಯಕ್ತಿ ಕಲ್ಪನಾಶಕ್ತಿ ವೃದ್ಧಿಸುವುದರ ಅವಕಾಶ ನೀಡುತ್ತದೆ ಕೆಲವು ಹಂತಗಳಲ್ಲಿ ಮಗು ಮಾತಿನಲ್ಲಿ ವ್ಯಕ್ತಪಡಿಸಲಾಗದ ತನ್ನ ಸಂವೇದನೆಯನ್ನು ಹೊರಗೆಡವಲು ಚಿತ್ರಕಲೆ ಇಂತಹ ಮೌನ ಭಾಷೆಯನ್ನು ಅವಲಂಬಿಸುತ್ತದೆ. ಚಿತ್ರಕಲೆ ಎಂಬ ವರ್ಣಮಯ ಕ್ರಿಯೆ ಮಗುವಿನ ಆಪ್ತಮಿತ್ರನಂತೆ ಯಾಕೆಂದರೆ ತಾನು ರೂಪಿಸಿದ ಚಿತ್ರದ ಮೂಲಕ ಮನಸ್ಸಿನಲ್ಲಿರುವ ಅದೃಶ್ಯವಾದ ಅನೇಕ ಭಾವನೆಗಳ ಸ್ವರೂಪಗಳನ್ನು ತಾನೇ ಸೃಷ್ಟಿಸಿ ಅದನ್ನು ನೋಡಿ ಆನಂದಿಸುತ್ತಾರೆ. ಗಟ್ಟಿಮುಟ್ಟಾದ ಮಕ್ಕಳೇ ಇಂದಿನ ದಿನ ತಮ್ಮ ಕಲೆಯನ್ನು ತೋರಿಸಲಾಗದ ದಿನದಲ್ಲಿ ಅಂಗವಿಕಲತೆಯಲ್ಲಿಯೂ ಸಹ ಕುಂಚ ಹಿಡಿಯಲು ಕಲಿಸಿದವರು ಶಿವಭೋಧ ಮಠಪತಿಯವರು.

ಇವರ ಸಾಧನೆಗೆ ಭಾರತ ಮತ್ತು ಹೋರ ದೇಶದಿಂದ ಅನೇಕ ಪ್ರಶಸ್ತಿಗಳು ಮುಡಿಗೇರಿಶಿ ಕೊಂಡಿರುತ್ತಾರೆ. ಮೂಡಲಗಿ ಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ ಹಮ್ಮಿಕೊಳ್ಳಲಾಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶಿವಭೋಧ ಮಠಪತಿಯವರ ಚಿತ್ರಕಲೆಯ ಸಾಧನೆಗೆ ಪ್ರಶಸ್ತಿಯನ್ನು ನೀಡಲಾಗುತ್ತಿರುವುದು ಹೆಮ್ಮೆಯ ಸಂಗತಿ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button