
ಪ್ರಗತಿವಾಹಿನಿ ಸುದ್ದಿ: ದಿನಕಳೆದಂತೆ ಮನುಷ್ಯ ಮನುಷತ್ವವನ್ನೇ ಮರೆತು ವರ್ತಿಸುತ್ತಿರುವ ಘಟನೆಗಳು ನಡೆಯುತ್ತಿವೆ. ಕ್ಷುಲ್ಲಕ ಕಾರಣಕ್ಕೆ ವೃದ್ಧೆಯೊಬ್ಬರನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿರುವ ಅಮಾನವೀಯ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಕಸದ ವಿಚಾರವಾಗಿ ಅಕ್ಕಪಕ್ಕದ ಮನೆಯವರಿಗೆ ಗಲಾಟೆ ನಡೆದಿದ್ದು, ಇದೇ ವಿಚಾರವಾಗಿ ಪಕ್ಕದ ಮನೆಯ ಮೂವರು ವೃದ್ಧೆಯನ್ನು ಮನೆಯ ಅಂಗಳದಲ್ಲಿ ಕಂಬಕ್ಕೆ ಕಟ್ಟಿ ಹಾಕಿ ಹೊಡೆದಿದ್ದಾರೆ. ಅಜ್ಜಿ ಚೀರಾಡುತ್ತಿದ್ದರೂ ಬಿಟ್ಟಿಲ್ಲ. ವೃದ್ಧೆಯನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರೇಮಾ, ದರ್ಶನ್ ಹಾಗೂ ಮಂಜುನಾಥ್ ಎಂಬುವವರು ವೃದ್ಧೆಯನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೂವರ ವಿರುದ್ಧ ಸಾಗರದ ಅನಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.



