
ಪ್ರಗತಿವಾಹಿನಿ ಸುದ್ದಿ: ಶಾಲೆಗೆ ರಜೆ ಇದ್ದ ಕಾರಣಕ್ಕೆ ಮನೆಯಿಂದ ಆಟವಡಲೆಂದು ಹೋಗಿದ್ದ ಐವರು ಮಕ್ಕಳು ನಾಪತ್ತೆಯಾಗಿ ಆತಂಕ ಮೂಡಿಸಿದ್ದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ.
ನಿನ್ನೆ ಬೆಳಿಗ್ಗೆ ಮನೆಯಿಂದ ಹೊರ ಹೋದ ಐವರು ಮಕ್ಕಳು ನಾಪತ್ತೆಯಾಗಿದ್ದರು. ಕಂಗಾಲಾದ ಪೋಷಕರು ಭದ್ರಾವತಿ ಠಾಣೆಯಲ್ಲಿ ದೂರು ನೀಡಿದ್ದಾರು. ರಾತ್ರಿಯೆಲ್ಲ ಹುಡುಕಾಟ ನಡೆಸಿದರೂ ಮಕ್ಕಳ ಸುಳಿವಿಲ್ಲ.
ಇಂದು ಬೆಳಿಗ್ಗೆ ಗ್ರಾಮದ ದೇವಸ್ಥಾನದ ಬಳಿ ಐವರು ಮಕ್ಕಳು ಪತ್ತೆಯಾಗಿದ್ದಾರೆ. ಮೀನು ಹಿಡಿಯಲು ಹೋಗಿದ್ದೆವು ಎಂದರೆ ಮನೆಯಲ್ಲಿ ಬೈಯ್ಯುತ್ತಾರೆಂದು ಭಯಗೊಂಡು ರಾತ್ರಿಯಿಡಿ ದೇವಸ್ಥಾನದ ಬಳಿಯೇ ಮಕ್ಕಳು ಕುಳಿತಿದ್ದರು ಎನ್ನಲಾಗಿದೆ. ಸದ್ಯ ಐವರು ಮಕ್ಕಳು ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.