ಶಿವಮೊಗ್ಗ ಧಗ ಧಗ : ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ; ಮನೆ-ಅಂಗಡಿಗಳ ಮೇಲೂ ಕಲ್ಲು ತೂರಾಟ; ರಸ್ತೆ ರಸ್ತೆಯಲ್ಲಿ ತಲ್ವಾರ್, ದೊಣ್ಣೆ ಹಿಡಿದು ನಿಂತ ಉದ್ರಿಕ್ತರು
ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಬೆನ್ನಲ್ಲೇ ನಿಷೇಧಾಜ್ಞೆ ನಡುವೆಯೇ ಉದ್ರಿಕ್ತರ ಗುಂಪು ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿ, ಮನೆ, ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ.
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಿಂದ ಮೃತ ಹರ್ಷ ಮೃತದೇಹದ ಮೆರವಣಿಗೆ ನಡೆಸಲಾಗಿದ್ದು, ಮೃತ ಹರ್ಷ ನಿವಾಸ ಬಸವನ ಬೀದಿಯಲ್ಲಿರುವ ಮನೆಗೆ ಪಾರ್ಥಿವಶರೀರ ತರಲಾಗಿದೆ. ಮೆರವಣಿಗೆ ವೇಳೆ ಉದ್ರಿಕ್ತರ ಗುಂಪು ಎನ್.ಟಿ.ರಸ್ತೆ, ಆಜಾದ್ ನಗರದ ಮೂರನೇ ಕ್ರಾಸ್ ಸೇರಿದಂತೆ ಹಲವೆಡೆಗಳಲ್ಲಿ ಕಲ್ಲುತೂರಾಟ ನದೆಸಿದೆ. ಸಿಕ್ಕ ಸಿಕ್ಕ ವಾಹನಗಳು, ಮನೆ, ಅಂಗಡಿಗಳ ಮೇಲೆ ಕಲ್ಲು ತೂರಾಟ ನದೆಸಿರುವ ಉದ್ರಿಕ್ತರು ಬೈಕ್ ಗಳಿಗೆ ಬೆಂಕಿ ಹಚ್ಚಿದ್ದು, ರಸ್ತೆ ಬದಿ ನಿಂತಿದ್ದ ವಾಹನಗಳ ಗಾಜು ಪುಡಿಗೈದಿದ್ದಾರೆ.
ಉದ್ರಿಕ್ತರ ಅಟ್ಟಹಾಸಕ್ಕೆ ಹಲವು ಮನೆಗಳ ಬಾಗಿಲು, ಅಂಗಡಿಗಳ ಕಿಟಕಿ ಗಾಜು ಒಡೆದು ಹೋಗಿದ್ದು, ಇನ್ನು ಸೀಗೆಹಟ್ಟಿಯಲ್ಲಿ ಕಿಡಿಗೇಡಿಗಳ ಗುಂಪೊಂದು ತಲ್ವಾರ್, ಲಾಂಗ್, ದೊಣ್ಣೆಗಳನ್ನು ಹಿಡಿದು ರಸ್ತೆಗಳಲ್ಲಿ ನಿಂತಿವೆ. ಪೊಲೀಸರು ಉದ್ರಿಕ್ತರನ್ನು ಸಮಾಧಾನಪಡಿಸಲು ಹರಸಾಹಸಪಡುತ್ತಿದ್ದು, ಜನರು ಪ್ರಾಣಭಯದಲ್ಲಿ ಕಾಲಕಳೆಯುವ ಸ್ಥಿತಿ ಎದುರಾಗಿದೆ.
ಭಜರಂಗದಳ ಕಾರ್ಯಕರ್ತನ ಬರ್ಬರ ಹತ್ಯೆ; ಬೆಚ್ಚಿಬಿದ್ದ ಜಿಲ್ಲೆ
ರಾಜ್ಯದಲ್ಲಿ ಮುಂದೆ ಏನಾಗುತ್ತೆ ಎಂಬುದಕ್ಕೆ ಇದು ಟ್ರಯಲ್?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ