Belagavi NewsBelgaum NewsKannada NewsKarnataka NewsNationalPolitics

*ಹಿರಿಯ ಅಧಿಕಾರಿ ಡಾ. ಸಂಜಯ ಡುಮ್ಮಗೊಳ ವಿರುದ್ಧ ಎಫ್ಐಆರ್ ದಾಖಲು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಈ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆ ಮತ್ತು ಬೆಳಗಾವಿ ತಾಲೂಕು ಆರೋಗ್ಯ ಅಧಿಕಾರಿ ಆಗಿದ್ದ ಡಾ. ಸಂಜಯ್ ಡುಮ್ಮಗೊಳ ಅವರು ಕೆಲ ಅಧಿಕಾರಿಗಳ ಜೊತೆ ಸೇರಿ ಗೋಲ್ ಮಾಲ್ ಮಾಡಿರುವ ಆರೋಪದಡಿ ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ಕಾನೂನು ಬಾಹಿರವಾಗಿ ನಕಲಿ ದಾಖಲೆ ಸೃಷ್ಟಿಸಿರುವ ಆರೋಪದಡಿ ಗೆಜೆಟೆಡ್ ಅಧಿಕಾರಿ ಡಾ. ಸಂಜಯ ಡುಮ್ಮಗೊಳ ಸೇರಿದಂತೆ 5 ಜನರ ವಿರುದ್ಧ ಬೆಳಗಾವಿ ನಗರದ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ರುಮೇವಾಡಿ ಗ್ರಾಮದ ವಿನೋದ ವೆಂಕಟ ನಾಯಿಕ ಎಂಬುವರು ನೀಡಿರುವ ದೂರಿನ ಮೆರೆಗೆ ಕ್ಯಾಂಪ್ ಠಾಣೆಯ ಪೊಲೀಸರು ಬಿಎನ್‌ಎಸ್ ಕಾಯ್ದೆ 2023 ಸಹಕಲಂ 318 (2), 336 (2), 336 (3) 340 (2) ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಡಾ. ಸಂಜಯ ಡುಮ್ಮಗೋಳ, ಗೀತಾ ಪಾಂಡುರಂಗ ಕಾಟಗಾಳಕರ, ಪ್ರಕಾಶ ಮಾರುತಿ ಬೆತ್ತಗಾವಡೆ, ಸವಿತಾ ಪಾಂಡುರಂಗ ಕಾಟಗಾಳಕರ ಮತ್ತು ಅಶೋಕ ದೇವಪ್ಪ ನಾಗರಾಳ ವಿರುದ್ಧ ದೂರು ದಾಖಲಾಗಿದೆ.

ಇದರಲ್ಲಿನ ಆರೋಪಿತರು ಫಿರ್ಯಾದಿದಾರರ ಮತ್ತು ಸಾರ್ವಜನಿಕರ ಹೆಸರಿನಲ್ಲಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಮತ್ತು ಪೋರ್ಜರಿ ಸಹಿ ಮಾಡಿ, ಸಮಾಜದಲ್ಲಿ ಕೆಟ್ಟ ಹೆಸರು ಬರುವಂತೆ ಮಾಡಿದ್ದಾರೆಂದು ಗಂಭೀರ  ಆರೋಪ ಮಾಡಲಾಗಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button