Latest

*ತಂದೆಯನ್ನೇ ಬರ್ಬರವಾಗಿ ಹತ್ಯೆಗೈದ ಮಕ್ಕಳು*

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಆಸ್ತಿ ಕಲಹಕ್ಕೆ ಮಕ್ಕಳು ತಂದೆಯನ್ನೇ ಹತ್ಯೆಗೈದ ಘೋರ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ನಡೆದಿದೆ.

ಕೆ ಎಸ್ ಆರ್ ಪಿಯ ನಿವೃತ್ತ ಎ ಆರ್ ಎಸ್ ಐ ನಾಗೇಂದ್ರಪ್ಪ ಕೊಲೆಯಾದ ದುರ್ದೈವಿ. ನಾಗೇಂದ್ರಪ್ಪ ಶವ ಇತ್ತೀಚೆಗೆ ಶಿರಾಳಕೊಪ್ಪದಲ್ಲಿ ಚರಂಡಿಯಲ್ಲಿ ಪತ್ತೆಯಾಗಿತ್ತು. ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿದ್ದು, ಮಕ್ಕಳೇ ಸುಪಾರಿಕೊಟ್ಟು ತಂದೆಯ ಕೊಲೆಗೈದಿರುವುದು ಬೆಳಕಿಗೆ ಬಂದಿದೆ.

ನಾಗೇಂದ್ರಪ್ಪಗೆ ಐದು ಎಕರೆ ತೋಟವಿದ್ದು, ಉತ್ತಮ ಫಸಲು ಬರುತ್ತಿತ್ತು. ಉತ್ತಮ ಆದಾಯಗಳನ್ನು ಪಡೆಯುತ್ತಿದ್ದ ನಾಗೇಮ್ದ್ರ ಮೊದಲ ಪತ್ನಿಗೆ ಐವರು ಮಕ್ಕಳು. ಮೊದಲ ಪತ್ನಿ ಸಾವಿನ ಬಳಿಕ ವಿಧವೆಯೋರ್ವಳನ್ನು ಎರಡನೇ ವಿವಾಹವಾಗಿದ್ದರು. ಎರಡನೆ ಪತ್ನಿಗೆ ಗಂಡು ಮಗುವಾಗಿತ್ತು. ಆಸ್ತಿ ಪಾಲು ಮಾಡುವಂತೆ ಮೊದಲ ಪತ್ನಿ ಮಕ್ಕಳು ಪಟ್ಟು ಹಿಡಿದಿದ್ದರು. ಆದರೆ ನಾಗೇಂದ್ರಪ್ಪ ನಿರಾಕರಿಸಿದ್ದ. ಇದರಿಂದ ಕೋಪಗೊಂಡ ಮೊದಲ ಪತ್ನಿಯ ಇಬ್ಬರು ಗಂಡು ಮಕ್ಕಳು ತಂದೆಯ ಕೊಲೆಗೆ ಸಂಚು ರೂಪಿಸಿದ್ದಾರೆ.

ನಾಗೇಂದ್ರಪ್ಪ ಮೊದಲ ಪತ್ನಿ ಮಕ್ಕಳಾದ ಮಂಜುನಾಥ್ ಹಾಗೂ ಉಮೇಶ್, ಶಿವಮೊಗ್ಗದ ಬೋಗಿ ಗ್ರಾಮದ ಮೂವರಿಗೆ ತಂದೆಯ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ. ತಂದೆ ಕೊಲೆಗೈದರೆ 5 ಲಕ್ಷ ಕೊಡುವುದಾಗಿ ಹೇಳಿದ್ದರು. ಅದರಂತೆ ಸುಪಾರಿ ಪಡೆದ ಬೋವಿ ಗ್ರಾಮದ ರಿಜ್ವಾನ್, ಹಬೀಬುಲ್ಲ, ಸುಹೇಲ್ ಮೂವರು ನಾಗೇಂದ್ರಪ್ಪ ಭದ್ರಾವತಿ ಕೋರ್ಟ್ ಗೆ ಹೋಗಿ ಶಿಕಾರಿಪುರಕ್ಕೆ ಬರುವಾಗ ಆಟೋದಲ್ಲಿ ಕರೆದೊಯ್ದು ಮತ್ತುಬರುವ ಔಷಧ ಕುಡಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಶವವನ್ನು ಕುಸೂರು ಗ್ರಾಮದ ಬಳಿ ಚರಂಡಿಗೆ ಎಸೆದು ಹೋಗಿದ್ದರು.

ಪ್ರಕರಣ ಸಂಬಂಧ ನಾಗೇಂದ್ರಪ್ಪ ಅವರ ಇಬ್ಬರು ಮಕ್ಕಳು ಹಾಗೂ ಸುಪಾರಿ ಪಡೆದ ಮೂವರು ಸೇರಿ ಐದು ಆರೋಪಿಗಳನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.

*ಸಿದ್ದರಾಮಯ್ಯ ವಿರುದ್ಧ ಅಖಾಡಕ್ಕಿಳಿಯಲು ಸಜ್ಜಾದ ಬಿ.ವೈ.ವಿಜಯೇಂದ್ರ?; ವರುಣ ನನ್ನ ಪಂಚಪ್ರಾಣ ಎಂದಿದ್ದೇಕೆ?*

https://pragati.taskdun.com/vidhanasabha-electionsiddaramaiahb-y-vijayendravaruna/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button