ತಬ್ಲಿಗಿಗಳ ಆಗಮನ; ಹೆಚ್ಚಿದ ಕೊರೊನಾ ಭೀತಿ

ಬೆಳಗಾವಿ ಗಡಿ ಮೂಲಕ ಶಿವಮೊಗ್ಗಕ್ಕೆ ಬಂದ ತಬ್ಲಿಘಿಗಳು

 

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಅಹಮದಾಬಾದ್‍ನಿಂದ ಬೆಳಗಾವಿ ಗಡಿ ಮೂಲಕ ಶಿವಮೊಗ್ಗಕ್ಕೆ ತಬ್ಲಿಘಿಗಳ ಎಂಟ್ರಿಯಾಗಿದ್ದು, ಮಲೆನಾಡಿಗರಲ್ಲಿ ಕೊರೊನಾ ಭೀತಿ ಹೆಚ್ಚಿಸಿದೆ.

ಶಿಕಾರಿಪುರ ಮೂಲದ 8 ಮತ್ತು ತೀರ್ಥಹಳ್ಳಿಯ ಒಬ್ಬರು ತಬ್ಲಿಘಿಗಳು ಗುಜರಾತ್‍ನ ಅಹಮದಾಬಾದ್‍ನಿಂದ ಬೆಳಗಾವಿ ಗಡಿ ಮೂಲಕ ಶಿವಮೊಗ್ಗಕ್ಕೆ ವಾಪಸ್ ಬಂದಿದ್ದು, ಇದು ಮಲೆನಾಡಿಗರಲ್ಲಿ ಕೊರೊನಾ ಭೀತಿ ಹೆಚ್ಚಿಸಿದೆ.

ಮಾರ್ಚ್ 5ರಂದು ಗುಜರಾತ್‍ನ ಅಹಮದಾಬಾದ್‍ಗೆ ದಾವಣಗೆರೆಯಿಂದ ರೈಲಿನ ಮೂಲಕ ಜಿಲ್ಲೆಯ 9 ಜನರು ತೆರಳಿದ್ದರು. ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗವಹಿಸಿದ ನಂತರ ಮಸೀದಿಯೊಂದರಲ್ಲಿ ಇವರೆಲ್ಲಾ ಆಶ್ರಯ ಪಡೆದಿದ್ದರು. ಅಲ್ಲದೇ ಲಾಕ್‍ಡೌನ್ ವೇಳೆ ಗುಜರಾತ್ ಸರ್ಕಾರ ಇವರನ್ನೆಲ್ಲಾ ಕ್ವಾರಂಟೈನ್‍ನಲ್ಲಿ ಕೂಡ ಇರಿಸಿತ್ತು. ಅಲ್ಲಿನ ಸರ್ಕಾರದ ಅನುಮತಿ ಮೇರೆಗೆ ಶುಕ್ರವಾರ ರಾತ್ರಿ ಈ ತಬ್ಲಿಘಿಗಳು ಮುಂಬೈ, ಬೆಳಗಾವಿ ಮೂಲಕ ಇದೀಗ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಇವರೆಲ್ಲರನ್ನೂ ಪ್ರಾಥಮಿಕ ಹಂತದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಶಿವಮೊಗ್ಗದ ಬಾಪೂಜಿನಗರದ ಹಾಸ್ಟೆಲ್‍ವೊಂದರಲ್ಲಿ ಕ್ವಾರಂಟೈನ್ ಮಾಡಿ ನಿಗಾವಹಿಸಲಾಗಿದೆ.

Shivamogh,tabligi,entry

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button