Latest

ರಾಘವೇಂದ್ರ ರಾಜ್ ಕುಮಾರ್ ಆರಾಮವಾಗಿದ್ದಾರೆ ಎಂದ ಶಿವರಾಜ್ ಕುಮಾರ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಟ ರಾಘವೇಂದ್ರ ರಾಜ್ ಕುಮಾರ್ ಆರೋಗ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಸಹೋದರ ಶಿವರಾಜ್ ಕುಮಾರ್, ರಾಘಣ್ಣ ಆರಾಮವಾಗಿದ್ದಾರೆ. ಯಾವುದೇ ತೊಂದರೆಯಿಲ್ಲ. ನಾಳೆ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್, ರಾಘಣ್ಣ ಇಂದು ಹುಷಾರಾಗಿದ್ದಾರೆ. ಅವರಿಗೆ ಹೃದಯ ಸಂಬಂಧಿತ ಸಮಸ್ಯೆ ಇರುವುದು ನಿಮಗೆಲ್ಲ ಗೊತ್ತು. ನಿನ್ನೆ ಕೆಲಸದ ಒತ್ತಡ, ಸುಸ್ತಿನಿಂದ ಸ್ವಲ್ಪ ಆರೋಗ್ಯ ಏರುಪೇರಾಗಿದೆ. ಈಗ ಹುಷಾರಾಗಿದ್ದಾರೆ ಏನೂ ಸಮಸ್ಯೆಯಿಲ್ಲ ಎಂದರು.

ಇತ್ತೀಚೆಗೆ ರಾಘಣ್ಣ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅದೇ ನಮಗೆ ಖುಷಿ. ಕಳೆದ ಮೂರು ವರ್ಷಗಳಿಂದ ಬ್ಯುಸಿಯಾಗಿದ್ದಾರೆ. ಮುಂದೆಯೂ ಸಿನಿಮಾಗಳಲ್ಲಿ ಬ್ಯುಸಿಯಾಗಿರುತ್ತಾರೆ ಎಂದು ಹೇಳಿದರು.

Home add -Advt

Related Articles

Back to top button