Latest

ದುಡಿದ ಹಣ ಬ್ಯಾಂಕ್ ನಲ್ಲಿಡದೇ ಪೆಟ್ಟಿಗೆಯಲ್ಲಿಟ್ಟ ವ್ಯಾಪಾರಿ; ಗೆದ್ದಲು ಹಿಡಿದ ನೋಟು ನೋಡಿ ಶಾಕ್ ಆದ ಉದ್ಯಮಿ

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ವ್ಯಾಪಾರದಲ್ಲಿ ಬಂದ ಹಣವನ್ನೆಲ್ಲ ಬ್ಯಾಂಕ್ ನಲ್ಲಿ ಠೇವಣಿಯಿಡದೇ ಪೆಟ್ಟಿಗೆಯಲ್ಲಿ ತುಂಬಿಟ್ಟ ಪರಿಣಾಮ ಲಕ್ಷಾಂತರ ರೂಪಾಯಿ ಗೆದ್ದಲು ಹಿಡಿದು ಹಾಳಾಗಿರುವ ಘಟನೆ ಹೈದರಾಬಾದ್ ನಲ್ಲಿ ಬೆಳಕಿಗೆ ಬಂದಿದೆ.

ಮೈಲಾವರಂ ನಿವಾಸಿ ಬಿಜ್ಲಿ ಚಾಮಲಯ್ಯ ಹಂದಿ ವ್ಯಾಪಾರಿಯಾಗಿದ್ದು, ತಾವು ದುಡಿದ ಹಣವನ್ನೆಲ್ಲ ಬ್ಯಾಂಕ್ ನಲ್ಲಿಡದೇ ಶೇಖರಿಸಿ ಪೆಟ್ಟಿಗೆಯಲ್ಲಿ ತುಂಬಿಟ್ಟಿದ್ದಾರೆ. ಹಣ ಸುರಕ್ಷಿತವಾಗಿದೆಯೇ ಎಂಬುದನ್ನೂ ನೋಡಿಲ್ಲ. ವರ್ಷದ ಬಳಿಕ ಪೆಟ್ಟಿಗೆ ತೆಗೆದು ನೋಡಿದಾಗ ಇದೀಗ ಹಣ ಗೆದ್ದಲು ತಿಂದು ನಾಶವಾಗಿದೆ. ಇದರಿಂದ ಬೇಜಾರಾದ ಚಾಮಲಯ್ಯ, ಚೂರಾದ ಹಣವನ್ನು ತೆಗೆದುಕೊಂಡು ಹೋಗಿ ರಸ್ತೆಯಲ್ಲಿ ಆಟವಾಡುತ್ತಿದ್ದ ಮಕ್ಕಳಿಗೆ ಹಂಚಿದ್ದಾರೆ.

Home add -Advt

ಚಿಕ್ಕ ಚಿಕ್ಕ ಮಕ್ಕಳು ದುಡ್ಡು ಹಿಡಿದುಕೊಂಡು ಆಟವಾಡುತ್ತಿರುವುದನ್ನು ಕಂಡ ಪೊಲೀಸರು ವಿಚಾರಿಸಿದಾಗ ಈ ವಿಷಯ ಬಹಿರಂಗವಾಗಿದೆ.

Related Articles

Back to top button