Belagavi NewsBelgaum NewsKannada NewsKarnataka NewsLatest

*ಜೊಲ್ಲೆ ಶಿಕ್ಷಣ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ಬಿಂಬಿಸುವ ಕಾರ್ಯ ಮಾಡಲಾಗುತ್ತಿದೆ; ಶಾಸಕಿ ಶಶಿಕಲಾ ಜೊಲ್ಲೆ*

ಶಿವಶಂಕರ ಜೊಲ್ಲೆ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ


ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ‘ಜೊಲ್ಲೆ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರನ್ನು ವಿಶ್ವಾಸದಲ್ಲಿ ತೆಗೆದುಕೊಂಡು ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಸಂಸ್ಕಾರ ಬಿಂಬಿಸುವ ಕಾರ್ಯ ಮಾಡಲಾಗುತ್ತಿದೆ. ೨೦೧೩ರಲ್ಲಿ ಬಾಡಿಗೆ ಕಟ್ಟಡವೊಂದರಲ್ಲಿ ೭ ಮಕ್ಕಳೊಂದಿಗೆ ಆರಂಭಿಸಿದ ನಮ್ಮ ಈ ಸಂಸ್ಥೆಯಲ್ಲಿ ಇಂದು ೭೭೮ ವಿದ್ಯಾರ್ಥಿಗಳು ಓದುತ್ತಿದ್ದಾರೆ’ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ನಗರದ ಮುನಿಸಿಪಲ್ ಪ್ರೌಢಶಾಲೆಯ ಮೈದಾನದಲ್ಲಿ ಜೊಲ್ಲೆ ಶಿಕ್ಷಣ ಸಂಸ್ಥೆಯ ಸ್ಥಳೀಯ ಶಿವಶಂಕರ ಜೊಲ್ಲೆ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘೨೦೦೮ರಲ್ಲಿ ರಾಜಕೀಯ ಪ್ರವಾಸ ಪ್ರಾರಂಭಗೊಂಡ ತಕ್ಷಣ ಬಹಳಷ್ಟು ಜನರು ಶಿಕ್ಷಣ ಸಂಸ್ಥೆಯನ್ನು ಇಲ್ಲಿ ಆರಂಭಿಸಲು ಒತ್ತಾಯಿಸಿದರು. ಎಲ್ಲರ ಒತ್ತಾಸೆಯಂತೆ ೨೦೧೩-೧೪ರಲ್ಲಿ ನಾವು ಇಲ್ಲಿ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದೇವು. ಆಡಳಿತ ಮಂಡಳಿಯು ಕಟ್ಟಡ, ಮೈದಾನ, ಎಲ್ಲ ಸೌಲಭ್ಯಗಳನ್ನು ಒದಗಿಸಬಹುದು. ಆದರೆ ಅದನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳುವ ಜವಾಬ್ದಾರಿ ಮುಖ್ಯಸ್ಥರದ್ದು ಇರುತ್ತದೆ. ಅದನ್ನು ನಮ್ಮ ಪ್ರಾಚಾರ್ಯೆ ಊರ್ಮಿಳಾ ಚೌಗುಲೆ ಸುವ್ಯವಸ್ಥಿತವಾಗಿ ನಿಭಾಯಿಸುತ್ತಿದ್ದಾರೆ. ರಾಜಕೀಯ ಪ್ರವಾಸದೊಂದಿಗೆ ಕ್ಷೇತ್ರದ ಅಭಿವೃದ್ಧಿಯೊಂದಿಗೆ ಜೊಲ್ಲೆ ಗ್ರುಪ್ ಅಡಿಯಲ್ಲಿ ಶಿಕ್ಷಣಕ್ಕೂ ಇಲ್ಲಿ ಮಹತ್ವ ನೀಡಲಾಗುತ್ತಿದೆ. ಪಾಲಕರು ತಮ್ಮ ಮಕ್ಕಳಿಗಾಗಿ ಬ್ಯಾಂಕ್ ಬ್ಯಾಲನ್ಸ್ ಅಥವಾ ಆಸ್ತಿ-ಪಾಸ್ತಿ ಮಾಡುವುದಕ್ಕಿಂತ ಅವರನ್ನೆ ಆಸ್ತಿಯನ್ನಾಗಿ ಮಾಡಿ. ಶಿಕ್ಷಣ ಮಹತ್ವದ್ದು, ಆದರೆ ಅಂಕಗಳಿಗಾಗಿ ಮಕ್ಕಳ ಮೇಲೆ ಭಾರ ಹೇರಬಾರದು’ ಎಂದರು.

ಮ್ಯಾಗ್ನಂ ಟಫ್ ಇಂಡಿಯಾ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಬಸವಪ್ರಸಾದ ಜೊಲ್ಲೆ, ಶಾಲೆಯ ಪ್ರಾಚಾರ್ಯೆ ಊರ್ಮಿಳಾ ಚೌಗುಲೆ ಮಾತನಾಡಿದರು. ಶರ್ವರಿ ಪರೀಟ ಮತ್ತು ಅಲೋಕ ಪಾಟೀಲ ವಿದ್ಯಾರ್ಥಿಗಳು ಶಾಲೆಯ ವರದಿಯನ್ನು ವಾಚಿಸಿದರು. ಪ್ರಾಥಮಿಕ ಶಾಲೆಯ ಮಯೂರ ಮುರ್ದಂಡೆ, ತನಿಷ್ಕಾ ಪಾಟೀಲ, ಪ್ರೌಢಶಾಲೆಯ ಸಂಸ್ಕಾರ ಪರೀಟ, ವೈಷ್ಣವಿ ಹಿರೆಕೊಡಿ ವಿದ್ಯಾರ್ಥಿಗಳು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದರು.

ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಸಂಚಾಲಕ ವಿಶ್ವನಾಥ ಕಮತೆ, ರಾಜೇಂದ್ರ ಗುಂದೇಶಾ, ವೈಶಾಲಿ ನಿಕಾಡೆ, ನಗರಸಭೆ ಸದಸ್ಯ ಸಂತೋಷ ಸಾಂಗಾವಕರ, ನೀತಾ ಬಾಗಡೆ, ಕಾವೇರಿ ಮಿರ್ಜೆ, ಆಶಾ ಟವಳೆ, ಮಾಜಿ ಅಧ್ಯಕ್ಷ ಸುನೀಲ ಪಾಟೀಲ, ಪ್ರಣವ ಮಾನವಿ, ವಿಜಯ ರಾವುತ, ವಿವೇಕಾನಂದ ಬಂಕೊಳ್ಳಿ, ಲಕ್ಷ್ಮಣ ಮಾಳಿ, ಬಾಳಾಸಾಹೇಬ ಜೋರಾಪುರೆ, ಮೊದಲಾದವರು ಸೇರಿದಂತೆ ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button