ಪ್ರಗತಿವಾಹಿನಿ ಸುದ್ದಿ: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಚುನಾವಣಾ ಪ್ರಚಾರದ ವೇಳೆ ದುರಂತವೊಂದು ಸಂಭವಿಸಿದೆ. ರ್ಯಾಲಿ ವೇಳೆ ಅಪಘಾತದಲ್ಲಿ ಓರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರಿನ ಕೆ.ಆರ್.ಪುರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಈ ಅಪಘತ ಸಂಭವಿಸಿದೆ. ಕೆ.ಆರ್.ಪುರದ ಪ್ರಕಾಶ್ (55) ಮೃತ ದುರ್ದೈವಿ. ಇವರು ಬಿಜೆಪಿ ಕಾರ್ಯಕರ್ತ ಎಂದು ತಿಳಿದುಬಂದಿದೆ.
ಹೋಂಡಾ ಆಕ್ಟೀವಾ ಬೈಕ್ ನಲ್ಲಿ ಪ್ರಕಾಶ್ ತೆರಳುತ್ತಿದ್ದರು. ಈ ವೇಲೆ ಬಿಜೆಪಿ ಮುಖಂಡರೊಬ್ಬರು ಕಾರಿನಿಂದ ಇಳಿಯಲು ಏಕಾಏಕಿ ಕಾರಿನ ಬಾಗಿಲು ತೆಗೆದಿದ್ದಾರೆ. ಕಾರಿನ ಬಾಗಿಲು ಟಚ್ ಆಗಿ ಬೈಕ್ ನಲ್ಲಿದ್ದ ಪ್ರಕಾಶ್ ಕೆಳಗೆ ಬಿದ್ದಿದ್ದಾರೆ. ಹೀಗೆ ಕೆಳಗೆ ಬಿದ್ದ ಪ್ರಕಾಶ್ ಮೇಲೆ ಬಸ್ಸೊಂದು ಹರಿದು ಹೋಗಿದೆ.
ತಕ್ಷಣ ಪ್ರಕಾಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಪ್ರಚಾರದ ವೇಳೆ ಕಾರು ಅಪಘಾತದಲ್ಲಿ ವ್ಯಕ್ತಿ ಸಾವು ಪ್ರಕರಣ ಸಂಬಂಧ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ. ಪ್ರಕಾಶ್ ಅವರು ನಿಷ್ಠಾವಂತ ಬಿಜೆಪಿ ಕಾರ್ಯಕರ್ತ. ಹಲವು ದಿನಗಳಿಂದ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಇಂದು ಕಾರಿನ ಬಾಗಿಲು ತೆಗೆಯುವಾಗ ಬೈಕ್ ಗೆ ಡಿಕ್ಕಿಯಾಗಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಬಂದ ಬಸ್ ಅವರ ಮೇಲೆ ಹರಿದಿದೆ. ಘಟನೆಯಿಂದಾಗಿ ತುಂಬಾ ದು:ಖವಾಗಿದೆ. ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ. ಮೃತರ ಕುಟುಂಬಕ್ಕೆ ಪಕ್ಷದಿಂದ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ