Belagavi NewsBelgaum NewsPolitics

*ಸಚಿವರಿಗೇ ತಾಕತ್ತಿನ ಸವಾಲೆಸೆದ ಶೋಭಾ ಕರಂದ್ಲಾಜೆ*

ಪ್ರಗತಿವಾಹಿನಿ ಸುದ್ದಿ: ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಗೆ ನಾನು ಚಾಲೆಂಜ್ ಮಾಡುತ್ತೇನೆ. ತಾಕತ್ತಿದ್ದರೆ ನನ್ನ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಸವಾಲ್ ಹಾಕಿದರು.


ಭಾನುವಾರ ಬೆಳಗಾವಿ ಅಶೋಕ ನಗರದಲ್ಲಿರುವ ಇಎಸ್ಐ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬೈರತಿ ಸುರೇಶ್ ನೂರಾರು ಮುಡಾದ ದಾಖಲಾತಿಯನ್ನು ತಂದು ಸುಟ್ಟು ಹಾಕಿದ ಕುರಿತು ನಾನು ಧ್ವನಿ ಎತ್ತಿದೆ. ಈ ಕುರಿತು ಅವರು ನನ್ನ ಮೇಲೆ ಬೇರೆ ಬೇರೆ ಆರೋಪ ಮಾಡುತ್ತಿದ್ದಾರೆ. ಹಲವಾರು ಸಚಿವರು ಭ್ರಷ್ಟಾಚಾರದ‌ ತನಿಖೆ ಎದುರಿಸಿದ್ದಾರೆ. ಶೋಭಾ ಕರಂದ್ಲಾಜೆ ಯಾವತ್ತಿಗೂ ಭ್ರಷ್ಟಾಚಾರ ಮಾಡಿಲ್ಲ, ಮಾಡೋದಿಲ್ಲ ಮತ್ತು ಬಿಜೆಪಿಯಲ್ಲಿ ಕೊಟ್ಟ ಜವಾಬ್ದಾರಿಯನ್ನು ಜವಾಬ್ದಾರಿಯಿಂದ ಮಾಡುವವಳು ನಾನು. ಪೊನ್ನಣ್ಣನಿಗೂ ವಿದ್ಯುತ್ ಇಲಾಖೆಗೂ ಏನು ಸಂಬಂಧ, ಏನು ಮಾಡಲು ಹೊರಟ್ಟಿದ್ದೀರಿ ? ನಕಲಿ ದಾಖಲೆ ಸೃಷ್ಟಿಸಲು ಪೊನ್ನಣ್ಣನಿಗೆ ಜವಾಬ್ದಾರಿ ನೀಡಿದ್ದೀರಾ ? ಪೊನ್ನಣ್ಣ ಇರುವುದು ಮುಖ್ಯಮಂತ್ರಿಯ ಕಾನೂನು ಸಲಹೆಗಾರರಾಗಿ ಅವರಿಗೆ ನೀವು ವಿದ್ಯುತ್ ಇಲಾಖೆಯ ಜವಾಬ್ದಾರಿ ‌ನೋಡಿ ಎಂದರೆ ಅದರಲ್ಲಿಯೂ ಭ್ರಷ್ಟಾಚಾರ ಮಾಡಲು ಹೋರಟ್ಟಿದೀರಿ ಎನ್ನುವ ಸಂಶಯ ಕಾಡುತ್ತಿದೆ. ನಿಮ್ಮಲ್ಲಿ ಯಾವ ದಾಖಲಾತಿ ಇದೆ ತಕ್ಷಣ ಬಹಿರಂಗ ಪಡಿಸಿ ಎಂದು ಸವಾಲ್ ಹಾಕಿದರು‌.


ಬೈರತಿ ಸುರೇಶ್ ಮುಡಾ ದಾಖಲೆ ಸುಟ್ಟು ಹಾಕಿದ್ದು ಸತ್ಯ. ಅದಕ್ಕಾಗಿ ಈಗ ಇಡಿ, ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಹಲವಾರು ಸಂಘ ಸಂಸ್ಥೆಗಳು ಸರಕಾರದ ಮೇಲೆ ಕಣ್ಣಿಟ್ಟಿದ್ದಾರೆ‌. ನಿಮಗೆ ತಾಖತ್ತು ಇದ್ದರೆ ನನ್ನ ಭ್ರಷ್ಟಾಚಾರ ಬಹಿರಂಗ ಮಾಡಿ ಎಂದರು‌.

Home add -Advt


ಕರ್ನಾಟಕದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎನ್ನುವ ವಿಶ್ವಾಸ ಇದೆ ಹಾಗೂ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವೆಯಲ್ಲಿ ಶಿವಸೇನೆ, ಬಿಜೆಪಿಯ ಎನ್ ಡಿಎ ಗೆಲವು ಸಾಧಿಸಲಿದೆ ಎಂದರು.


ಬೆಂಗಳೂರಿನ ನಂತರ ಅತ್ಯಂತ ಹೆಚ್ವು ಕಾರ್ಮಿಕರ ಕಾಡ್೯ ಹೊಂದಿರುವ ಬೆಳಗಾವಿ ನಗರ. ಬಹಳ ದೊಡ್ಡ ಕೈಗಾರಿಕಾ ಕಂಪನಿಗಳು ಇವೆ. ಇಲ್ಲಿನ ಕೈಗಾರಿಕೆಯ ಕಂಪನಿಗಳು ಪುಣೆ ಹಾಗೂ ಮಹಾರಾಷ್ಟ್ರಕ್ಕೆ ವಸ್ತುಗಳನ್ನು ಕಳುಹಿಸಿಕೊಡುತ್ತಾರೆ. ಸುಮಾರು ಮೂರುವರೆ ಲಕ್ಷ ಕಾರ್ಮಿಕರು ಕಾರ್ಡ್ ಹೊಂದಿದ್ದಾರೆ. ಅವರ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದರು.


ಬೆಳಗಾವಿ ಅಶೋಕ ನಗರದಲ್ಲಿರುವ ಇಎಸ್ಐ ಆಸ್ಪತ್ರೆಗೆ ಶಿಥಿಲಾವಸ್ತೆಯಲ್ಲಿದ್ದು, ಹೊಸ ಕಟ್ಟಡ ನಿರ್ಮಾಣ ಮಾಡಲು ಟೆಂಡರ್ ಕರೆಯಲಾಗಿದೆ‌. ಬೆಳಗಾವಿಗೆ ಇರುವ ಈ ಆಸ್ಪತ್ರೆ 50 ಬೆಡ್ ಗಳನ್ನು ಹೊಂದಿದೆ. ಹೊಸ ಕಟ್ಟಡದಲ್ಲಿ 100 ಬೆಡ್ ಗಳ ವ್ಯವಸ್ಥೆ ಮಾಡಲು 152 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲು ಟೆಂಡರ್ ಕರೆಯಲಾಗಿದೆ ಎಂದರು.


ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

Back to top button