
ಪ್ರಗತಿವಾಹಿನಿ ಸುದ್ದಿ: ಜನರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ಹೆಚ್ಚಿದೆ. ಇಂದಿನಿಂದ ಪೆಟ್ರೋಲಿಯಂ ಕಂಪನಿಗಳು ದರ ಪರಿಷ್ಕರಣೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಂಡಿದ್ದಾರೆ.
19 ಕೆ.ಜಿ ಎಲ್‌ಪಿಜಿ ವಾಣಿಜ್ಯ ಬಳಕೆಯ ಸಿಲಿಂಡರ್ ದರದಲ್ಲಿ 6 ರೂ. ಹೆಚ್ಚಳವಾಗಿದೆ. 14 ಕೆ.ಜಿ ಗೃಹಬಳಕೆಯ ಸಿಲಿಂಡರ್ ದರ ಯಥಾ ಸ್ಥಿತಿ ಕಾಯ್ದುಗೊಂಡಿದೆ.
ವಾಣಿಜ್ಯ ಸಿಲಿಂಡರ್ ದರಯೇರಿಕೆಯಿಂದ ಹೋಟೆಲ್ ತಿನಿಸುಗಳ ಬೆಲೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಪರಿಷ್ಕೃತ ದರಗಳು ಇಂದಿನಿಂದಲೆ ದೇಶಾದ್ಯಂತ ಜಾರಿಗೆ ಬರಲಿವೆ.
ಕಳೆದ ಐದು ವರ್ಷಗಳಿಂದ ವಾಣಿಜ್ಯ ಸಿಲಿಂಡರ್ ದರ ಹೆಚ್ಚಾಗುತ್ತಲೇ ಇದೆ. ಪ್ರತಿ ವರ್ಷದ ಕೇಂದ್ರ ಬಜೆಟ್ ಬಳಿಕ ನಡೆಯುವ ಈ ಹಿಂದಿನ ಪರಿಷ್ಕರಣೆಗಳಿಗೆ ಹೋಲಿಸಿದಲ್ಲಿ ಇದು ಅತ್ಯಂತ ಕಡಿಮೆ ಬೆಲೆಯೇರಿಕೆಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ