ಯುಗಾದಿ ಹಬ್ಬಕ್ಕೆ ಚಿನ್ನ ಕೊಳ್ಳುವವರಿಗೆ ಶಾಕ್: ಮತ್ತೆ ದುಬಾರಿಯಾದ ಚಿನ್ನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸತತವಾಗಿ ಚಿನ್ನ, ಬೆಳ್ಳಿ ಬೆಲೆ ಏರಿಕೆ ಆಗುತ್ತಲೆ ಬರುತ್ತಿದೆ. ಯುಗಾದಿ ಹಬ್ಬಕ್ಕೆ ಚಿನ್ನ ಖರೀದಿ ಮಾಡಬೇಕು ಎನ್ನುವವರಿಗೆ ಚಿನ್ನ ಮತ್ತೆ ಏರಿಕೆ ಆಗುವ ಮೂಲಕ ಶಾಕ್ ನೀಡಿದೆ.
ಇಂದು ಯುಗಾದಿ ಹಬ್ಬ, ಈ ಹಬ್ಬದ ಸಂದರ್ಭದಲ್ಲಿ ಸ್ವಲ್ಪವಾದರೂ ಚಿನ್ನ ಖರೀದಿ ಮಾಡಬೇಕು ಎಂದು ಎಲ್ಲರೂ ಅಂದುಕೊಂಡಿರುತ್ತಾರೆ. ಆದರೆ ಹಳದಿ ಲೋಹ, ಚಿನ್ನದ ಬೆಲೆ ಸಾರ್ವಕಾಲಿಕ ಏರಿಕೆ ಆಗುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.
ದೇಶದಲ್ಲಿ ಚಿನ್ನದ ಬೆಲೆಗಳು ಇತ್ತೀಚೆಗೆ ಏರುಗತಿಯಲ್ಲಿವೆ. ಏ.1 ರಂದು 22 ಕ್ಯಾರೇಟ್ ಚಿನ್ನ 850 ರೂ, ಏರಿಕೆ ಆಗಿದೆ. ಏಪ್ರಿಲ್ 8 ರ ಹೊತ್ತಿಗೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಸುಮಾರು 65,650 ರೂ ಆಗಿದೆ.
ಒಂದು ವರ್ಷದ ಅವಧಿಯನ್ನು ನೋಡಿದರೆ ಭಾರತದಲ್ಲಿ ಚಿನ್ನದ ಬೆಲೆ ಸುಮಾರು 14% ರಷ್ಟು ಏರಿಕೆಯಾಗಿದೆ. ಭಾರತದಲ್ಲಿ ಚಿನ್ನದ ಬೆಲೆಗಳ ಏರಿಕೆ ಪ್ರವೃತ್ತಿಯು ಚಿನ್ನದ ಸಾಲಗಳ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬೆಳಗಾವಿ ಮಾರುಕಟ್ಟೆ ಪ್ರಕಾರ ಚಿನ್ನದ ಬೆಲೆ ಹೀಗಿದೆ:
22 ಕ್ಯಾರೇಟ್ ಚಿನ್ನದ ಬೆಲೆ
1 ಗ್ರಾಂಗೆ – 6,565 ರೂ.
10 ಗ್ರಾಂಗೆ – 65,650 ರೂ.
24 ಕ್ಯಾರೇಟ್ ಚಿನ್ನದ ಬೆಲೆ
1 ಗ್ರಾಂಗೆ – 7,162 ರೂ.
10 ಗ್ರಾಂಗೆ – 71,620 ರೂ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ