GIT add 2024-1
Beereshwara 33

ಸಂಸದ ಉಮೇಶ್ ಜಾಧವಗೆ ಶಾಕ್: ಕಾಂಗ್ರೆಸ್ ಸೇರಿದ ಬಂಜಾರ ಸಮುದಾಯದ ನಾಯಕ 

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ಚುನಾವಣೆ ಹೊತ್ತಲ್ಲೇ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ಉಮೇಶ ಜಾಧವ್ ಅವರ ಆಪ್ತ ಹಾಗೂ ಬಂಜಾರ ಸಮುದಾಯದ ಹಿರಿಯ ನಾಯಕ ವಿಠಲ್ ಜಾಧವ್ ಅವರು ಬಿಜೆಪಿ ತೊರೆದು ಇಂದು ಕಾಂಗ್ರೆಸ್‌ಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದು, ಬಿಜೆಪಿಗೆ ಶಾಕ್ ಎದುರಾಗಿದೆ. 

Emergency Service

ಇದೇ ಮೇ 7ರಂದು ರಾಜ್ಯದಲ್ಲಿ 2ನೇ ಹಂತದ ಮತದಾನ ನಡೆಯಲಿದೆ. ಚುನಾವಣೆ ಹೊತ್ತಲ್ಲೆ ಕಲಬುರಗಿ ಭಾಗದ ಬಂಜಾರ ಸಮುದಾಯದ ನಾಯಕ ಕಾಂಗ್ರೆಸ್ ಸೇರಿದ್ದಾರೆ. ನಗರದ ಮೌರ್ಯ ಹೋಟೆಲ್‌ನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ.ಶರಣಪ್ರಕಾಶ್ ಪಾಟೀಲ್‌, ಕಲಬುರಗಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ, ಶಾಸಕ ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಸೇರಿದಂತೆ ಇತರರು ಇದ್ದರು.

Laxmi Tai add
Bottom Add3
Bottom Ad 2