Belagavi NewsBelgaum NewsKannada NewsKarnataka News

*ಬಿಪಿಎಲ್ ಕಾರ್ಡ್ ಹೊಂದಿದ ಬೆಳಗಾವಿಯ 1,600ಕ್ಕೂ ಅಧಿಕ ಸರ್ಕಾರಿ ನೌಕರರಿಗೆ ಶಾಕ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ಸರ್ಕಾರ ಈಗಾಗಲೇ ಅರ್ಹರಿಗೆ ಬಿಪಿಎಲ್ ಕಾರ್ಡ್ ಇರಬೇಕು, ಅನರ್ಹರ ಕಾರ್ಡ್ ರದ್ದುಗೊಳಿಸುವ ಪರಿಷ್ಕರಣೆ ಪ್ರಕ್ರಿಯೆ ಮುಂದುವರಿಸಿದ್ದು, ಸರ್ಕಾರಿ ಅಧಿಕಾರಿಗಳಿಗೆ ಶಾಕ್ ನೀಡಿದೆ.‌

ಬಡ ಕುಟುಂಬಗಳಿಗೆ ಸೇರಬೇಕಾದ ‘ಬಿಪಿಎಲ್’ ರೇಷನ್ ಕಾರ್ಡ್ ಪಡೆದ 1600ಕ್ಕೂ ಅಧಿಕ ಸರ್ಕಾರಿ ನೌಕರರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ 1.39 ಕೋಟಿ ರೂ. ದಂಡ ವಿಧಿಸಿ ಬಿಸಿ ಮುಟ್ಟಿಸಿದೆ

2024-25ನೇ ಸಾಲಿನಲ್ಲಿ ಮತ್ತೆ ಕಾರ್ಯಾಚರಣೆ ನಡೆಸಿದಾಗ ಬಿಪಿಎಲ್ ಕಾರ್ಡ್ ಪಡೆದ 363 ನೌಕರರನ್ನು ಗುರುತಿಸಿ 17.10 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಇದೀಗ ಜಿಲ್ಲೆಯ ಒಟ್ಟು 1,679 ಸರಕಾರಿ ನೌಕರರಿಗೆ ನೋಟಿಸ್ ಜಾರಿ ಮಾಡಿ ಅವರಿಂದ 1,39,27,221 ರೂ.ದಂಡ ವಸೂಲಿ ಮಾಡಲಾಗಿದೆ.

2025-26ರಲ್ಲಿ ಕಾರ್ಯಾಚರಣೆ ವೇಳೆಯಲ್ಲಿ 1,407 ಅನರ್ಹ ಕುಟುಂಬಗಳು ಪಡೆದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಪತ್ತೆಮಾಡಿ 7,55,177 ರೂ. ದಂಡ ಸಂಗ್ರಹಿಸಲಾಗಿದೆ. ಸ್ವಯಂ ಪ್ರೇರಿತರಾಗಿ 932 ಅನರ್ಹರು ತಾವು ಪಡೆದಿದ್ದ ಬಿಪಿಎಲ್ ಕಾರ್ಡ್‌ಗಳನ್ನು ಸರೆಂಡ‌ರ್ ಮಾಡಿದ್ದಾರೆ. ಹಾಗೆಯೇ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದ 591 ಜನರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ.

Home add -Advt

ಸದ್ಯ 67,667 ಅಂತ್ಯೋದಯ, 10,72,692 ಬಿಪಿಎಲ್ ಹಾಗೂ 3,30,455 ಎಪಿಎಲ್ ಪಡಿತರ ಚೀಟಿಗಳು ಚಾಲ್ತಿಯಲ್ಲಿದ್ದು ಒಟ್ಟು 50,79,707 ಫಲಾನುಭವಿಗಳು ಇದ್ದಾರೆ. ಬಿಪಿಎಲ್ ಕಾರ್ಡ್ ಪಡೆದ ಅನರ್ಹರ ಪತ್ತೆ ಕಾರ್ಯಾಚರಣೆಯಲ್ಲಿ 2022ರಲ್ಲಿ1,316 ಸರಕಾರಿ ನೌಕರರು ಪಡೆದಿದ್ದ ಬಿಪಿಎಲ್ ಪಡಿತರ ಚೀಟಿಗಳನ್ನು ಪತ್ತೆ ಮಾಡಿ, 1.22 ಕೋಟಿ ರೂ.ವಿಧಿಸಲಾಗಿತ್ತು.

ಇನ್ನು ಸರಕಾರಿ ನೌಕರರು ಪಡೆದಿದ್ದ 1,679 ಬಿಪಿಎಲ್ ಚೀಟಿಗಳನ್ನು APL ಪಡಿತರ ಚೀಟಿಗಳಾಗಿ ಬದಲಾಯಿಸಲಾಗಿದೆ. ಇದರ ಜತೆಗೆ ಆಹಾರ ನಿರೀಕ್ಷಕರು ತನಿಖೆ ಮಾಡಿ ಹೆಚ್ಚಿನ ಆದಾಯ ಹೊಂದಿರುವ, 3 ಹೆಕ್ಟೇರ್‌ಗಿಂತ ಹೆಚ್ಚಿನ ಜಮೀನು ಹೊಂದಿರುವ 7,544 ಕುಟುಂಬ ಹಾಗೂ ಸ್ವಯಂ ಪ್ರೇರಿತರಾಗಿ ಸರೆಂಡರ್ ಮಾಡಿರುವ ಅನರ್ಹರ ಪಡಿತರ ಚೀಟಿಗಳನ್ನು ಕೂಡ ಎಪಿಎಲ್ ಪಡಿತರ ಚೀಟಿಗಳಾಗಿ ಪರಿವರ್ತನೆ ಮಾಡಲಾಗಿದೆ.

ಇದರ ನಡುವೆ ಸುಮಾರು 5 ಸಾವಿರಕ್ಕೂ ಅಧಿಕ ಸರ್ಕಾರಿ ನೌಕರರೂ ಬಿಪಿಎಲ್ ಕಾರ್ಡ್ ಹೊಂದಿರುವುದು ಬೆಳಕಿಗೆ ಬಂದಿದ್ದು, ಅಂಥವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ.

Related Articles

Back to top button