ಪ್ರಗತಿವಾಹಿನಿ ಸುದ್ದಿ: ಹರಿಯಾಣ ಪೊಲೀಸರು ಮತ್ತು ದಿಲ್ಲಿ ಕ್ರೈಂ ಬ್ರಾಂಚ್ ಶುಕ್ರವಾರ ಜಂಟಿ ಕಾರ್ಯಾಚರಣೆ ನಡೆಸಿ ಸೋನಿಪತ್‌ನಲ್ಲಿ ಮೂವರು ದರೋಡೆಕೋರರನ್ನು ಗುಂಡಿಕ್ಕಿ ಕೊಂಡಿದ್ದಾರೆ. ಆ ಮೂವರ ಪೈಕಿ ಇಬ್ಬರು ಕಳೆದ ತಿಂಗಳು ಪಶ್ಚಿಮ ದೆಹಲಿಯ ಬರ್ಗರ್ ಕಿಂಗ್ ಔಟ್‌ಲೆಟ್‌ನಲ್ಲಿ ಗುಂಡಿನ ದಾಳಿ ನಡೆಸಿದ ಆರೋಪಿಗಳು ಎಂದು ತಿಳಿದುಬಂದಿದೆ.
ಜಂಟಿ ಕಾರ್ಯಾಚರಣೆ ವೇಳೆ ಅಪರಾಧ ವಿಭಾಗದ ಸಬ್ ಇನ್ಸ್ ಪೆಕ್ಟರ್ ಅಮಿತ್ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ತಂಡ ಸಹಾಯಕ ಪೊಲೀಸ್ ಕಮಿಷನರ್ ಉಮೇಶ್ ಭರತ್ವಾಲ್ ನೇತೃತ್ವದಲ್ಲಿ ಮತ್ತು ಉಪ ಪೊಲೀಸ್ ಆಯುಕ್ತ ಅಮಿತ್ ಗೋಯೆಲ್ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆದಿದೆ.
ಎನ್‌ಕೌಂಟರ್ ಅನ್ನು ಖಾರ್ಖೋಡಾದ ಚಿನೋಲಿ ರಸ್ತೆಯಲ್ಲಿ ನಡೆಸಲಾಗಿದೆ. ಜಂಟಿ ಕಾರ್ಯಾಚರಣೆಯಲ್ಲಿ ಹತ್ಯೆಯಾದ ದರೋಡೆಕೋರರನ್ನು ಆಶಿಶ್ ಅಲಿಯಾಸ್ ಲಾಲು, ಸನ್ನಿ ಖರಾರ್ ಮತ್ತು ವಿಕ್ಕಿ ರಿಧಾನ ಎಂದು ಪೊಲೀಸರು ಗುರುತಿಸಿದ್ದಾರೆ. ಮತ್ತು ಅವರು ಮೂವರೂ ಹಿಮಾಂಶು ಭಾವು ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿದ್ದರು ಎಂದು ಹೇಳಿದ್ದಾರೆ.
ಜೂನ್ 18 ರಂದು ರಚೌರಿ ಗಾರ್ಡನ್ ಬರ್ಗರ್ ಕಿಂಗ್ ಔಟ್‌ಲೆಟ್‌ನಲ್ಲಿ 26 ವರ್ಷದ ಅಮನ್ ಜೂನ್ ಅನ್ನು ಆಶಿಶ್ ಮತ್ತು ರಿಧಾನಾ ಗುಂಡಿಕ್ಕಿ ಕೊಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ