ಪ್ರಗತಿವಾಹಿನಿ ಸುದ್ದಿ: ವಿದೇಶದಲ್ಲಿ ಡಿಕೆ ಶಿವಕುಮಾರ್ ಅವರು ರಾಹುಲ್ ಗಾಂಧಿ ಭೇಟಿ ಹಾಗೂ ಮಾತುಕತೆಗೆ ಸಂಬಂಧಪಟ್ಟಂತೆ ಸಾಕಷ್ಟು ಚರ್ಚೆಗಳಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ ಪಾರ್ಟಿ, ನಮ್ ಲೀಡರ್, ನನ್ನಿಷ್ಟ, ಏನ್ ಮಾಡಬೇಕು ಎಲ್ಲವನ್ನು ನಿಮ್ ಹತ್ರ ಹೇಳ್ಕೊಬೇಕಾ..? ಎಂದು ಸಿಡಿಮಿಡಿಗೊಂಡ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಭೇಟಿ ಮಾಡಿದ್ದು ನನ್ನ ವೈಯಕ್ತಿಕ, ಅವರನ್ನು ಭೇಟಿ ಮಾಡೋದಕ್ಕೆ ಯಾರ ಅನುಮತಿ ಕೇಳಬೇಕಾ.? ನನ್ನ ತಮ್ಮನ ಹತ್ರ ಏನು ಮಾತಾಡ್ತಿನಿ, ನನ್ನ ತಂಗಿ ಹತ್ರ, ಫ್ಯಾಮಿಲಿ ಹತ್ರ ಏನೆಲ್ಲಾ ಮಾತಾಡ್ತಿನಿ ಅಂತ ಎಲ್ಲವನ್ನೂ ಹೇಳಬೇಕಾ..? ಎಂದು ಸುದ್ದಿಗಾರರಿಗೆ ಪ್ರಶ್ನೆ ಮಾಡಿದರು.
ಇದೇ ವೇಳೆ ಶಾಸಕ ಮುನಿರತ್ನ ಬಂಧನದ ಬಗ್ಗೆ ಮಾತನಾಡಿದ್ದು, ಈ ವಿಚಾರದ ಬಗ್ಗೆ ನಂಗೆ ಸರಿಯಾದ ಮಾಹಿತಿ ಇಲ್ಲ. ಆದರೆ ಈ ಬಗ್ಗೆ ಮಾತನಾಡಲು ಬಿಜೆಪಿ ಇದೆ, ಆರ್ ಆಶೋಕ್ ಇದಾರೆ, ವಿಜಯೇಂದ್ರ ಇದಾರೆ, ಇನ್ನೂ ದೊಡ್ಡ ದೊಡ್ಡ ನಾಯಕರು ಇದಾರೆ. ಅವರು ಮಾತಾಡಬೇಕು ಎಂದು ಡಿಕೆ ಹೇಳಿದರು.
ಅಲ್ಲದೇ ಆ ಸಮುದಾಯದ ಮುಖ್ಯಸ್ಥರು, ಸ್ವಾಮಿಜಿಗಳು ಈ ಬಗ್ಗೆ ಮಾತನಾಡಬೇಕು. ಸರಿ ಅಂದ್ರೆ, ಸರಿ ಎಂದು ಹೇಳಲಿ ಅಥವಾ ತಪ್ಪು ಅಂದ್ರೆ ತಪ್ಪು ಅಂತ ಹೇಳಲಿ.. ನಾನು ಈಗ ಈ ಬಗ್ಗೆ ಮಾತಾಡಲ್ಲ, ಇನ್ನಷ್ಟು ಮಾಹಿತಿ ತಗೊಂಡು ನಂತರ ಮಾತನಾಡುತ್ತೇನೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ