
ಪ್ರಗತಿವಾಹಿನಿ ಸುದ್ದಿ, ಶಿರಸಿ – 2019 ರಲ್ಲಿ ನಡೆದ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶಿರಸಿ ನಗರ ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು
ನಗರದ ರಾಘವೇಂದ್ರ ಸರ್ಕಲ್ ಬಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಯುವಮೋರ್ಚಾ ಶಿರಸಿ ನಗರ ಅಧ್ಯಕ್ಷರಾದ ನಾಗರಾಜ ನಾಯ್ಕ್, ಜಿಲ್ಲಾ ಯುವಮೋರ್ಚಾ ಪ್ರಧಾನಕಾರ್ಯದರ್ಶಿ ವಿಶಾಲ ಮರಾಠೆ, ಯುವಮೋರ್ಚಾ ನಗರ ಪ್ರಧಾನಕಾರ್ಯದರ್ಶಿ ರವಿ ಶೆಟ್ಟಿ ಮತ್ತು ರಿಕ್ಷಾ ಮಾಲಕರಾದ ಮಂಜುನಾಥ್ ಬೋವಿ, ಸ್ಥಳೀಯ ಪ್ರಮುಖರಾದ ಮೋಹನ್ ತ್ರಾಸಿ, ಕ.ರಾ. ಡಿ. ನೌ.ಸಂ.ಅಧ್ಯಕ್ಷರಾದ ಕಿರಣ್ ನಾಯ್ಕ್ ಮತ್ತು ಪ್ರಮುಖರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ