*ಬೆಳಗಾವಿ ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 4 ದಿನ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಆರ್‌ಪಿಡಿ ಕಾಲೇಜು ಎದುರಿನ ಅಖಿಲ ಭಾರತ ಮಹಾಮಂಡಳ ಶ್ರೀ ಕೃಷ್ಣ ಮಠ ಹಾಗೂ ಸಭಾಭವನದಲ್ಲಿ ಚಾಂದ್ರ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಿಶೇಷ ಕಾರ್ಯಕ್ರಮಗಳು ಆಗಸ್ಟ್ 14 ರಿಂದ 17ರ ವರೆಗೆ ನಡೆಯಲಿದೆ.
14, 15 ರಂದು ಸಂಜೆ 6.30 ರಿಂದ 8 ರ ವರೆಗೆ ಶ್ರೀ ಕೃಷ್ಣ ಚಾರಿತ್ರ್ಯ ಮಂಜರಿ ಕುರಿತು ವಿ. ವೆಂಕಟೇಶ ಆಚಾರ್ಯ ಕಾಖಂಡಕಿ ಅವರಿಂದ ಪ್ರವಚನ ನಡೆಯಲಿದೆ.
ಆ. 16 ರಂದು ಚಾಂದ್ರ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉಪವಾಸ ಆಚರಣೆ, ಬೆಳೆಗ್ಗೆ 8 ರಿಂದ ಪೂಜ್ಯ ಕೂಡ್ಲಿ ಆರ್ಯ ಅಕ್ಷೋಭ್ಯ ತೀರ್ಥ ಮಠಾಧೀಶರಾದ ಶ್ರೀ ರಘು ವಿಜಯ ತೀರ್ಥ ಶ್ರೀ ಪಾದಂಗಳವರಿಂದ ಶ್ರೀಕೃಷ್ಣ ದೇವರಿಗೆ ಲಕ್ಷ ತುಳಸಿ ಅರ್ಚನೆ, ಶ್ರೀಗಳಿಂದ ಅನುಗ್ರಹ ಸಂದೇಶ ನಡೆಯಲಿದೆ.
ಮಧ್ಯಾಹ್ನ 12 ರಿಂದ ಸಂಜೆ 6 ಗಂಟೆವರೆಗೆ ವಿವಿಧ ಭಜನಾ ಮಂಡಳಿಗಳಿಂದ ಹರಿ ಭಜನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. 6 ರಿಂದ 7.30 ರವರೆಗೆ ದತ್ತಕುಮಾರ ಮುತಾಲಿಕ ದೇಸಾಯಿ ಮತ್ತು ಸಂಗಡಿಗರಿಂದ, 7:30 ರಿಂದ 9 ರವರೆಗೆ ಸಹನಾ ಮತ್ತು ಸಂಜನಾ ಕುಲಕರ್ಣಿ , ಸಂಗಡಿಗರಿಂದ ಸಂಗೀತ ಸುಧಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 11:00 ಕ್ಕೆ ಶ್ರೀ ಕೃಷ್ಣ ದೇವರಿಗೆ ವಿಶೇಷ ಪೂಜೆ, ರಾತ್ರಿ 12.06 ರ ಚಂದ್ರೋದಯಕ್ಕೆ ಅರ್ಘ್ಯ ಪ್ರದಾನ, ಆ. 17 ರಂದು ಬೆಳಗ್ಗೆ 4 ಗಂಟೆಗೆ ನಿರ್ಮಾಲ್ಯ ಅಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಬೆಣ್ಣೆ ಅಲಂಕಾರ, 7 ಗಂಟೆಗೆ ಮಹಾಪೂಜೆ ಮಂಗಳಾರತಿ, 8:00 ಕ್ಕೆ ಅನ್ನ ಸಂತರ್ಪಣೆ, ತೀರ್ಥ ಪ್ರಸಾದ, ಸಂಜೆ 4:30 ರಿಂದ 530 ವರೆಗೆ ಚಿಣ್ಣರಿಂದ ಭರತನಾಟ್ಯ ಪ್ರದರ್ಶನ, 5.30 ರಿಂದ 6 ವರೆಗೆ ಚಿಣ್ಣರಿಂದ ಶ್ರೀ ಕೃಷ್ಣ ವೇಷ ಸ್ಪರ್ಧೆ, 6.30 ಕ್ಕೆ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ, 7 ಕ್ಕೆ ಪಲ್ಲಕಿ ಉತ್ಸವ, ರಥೋತ್ಸವ, ದೀಪಾರಾಧನೆ, ರಂಗ ಪೂಜೆ, ಸ್ವಸ್ತಿವಚನ, ಮಹಾಮಂಗಳಾರತಿ ನಡೆಯಲಿದೆ.
ಭಕ್ತರು ದೇವರ ಸೇವಾ ಕಾರ್ಯಗಳಿಗೆ ಹಾಗೂ ಮಾಹಿತಿಗೆ ಶ್ರೀನಿವಾಸಾಚಾರ್ಯ ಹೊನ್ನಿದಿಬ್ಬ ಮೊಬೈಲ್ ಸಂಖ್ಯೆ 988645735, ಎಂ.ಜಿ.ಭಟ್ ಮೊಬೈಲ್ ಸಂಖ್ಯೆ : 9986779878 ಮತ್ತು ವೆಂಕಟೇಶ ಆಚಾರ್ಯ ಉಪಾಧ್ಯಾಯ ಮೊಬೈಲ್ ಸಂಖ್ಯೆ 948075 0660 ಇಲ್ಲಿಗೆ ಸಂಪರ್ಕಿಸುವಂತೆ ಶ್ರೀ ಕೃಷ್ಣ ಮಠದ ಪ್ರಕಟಣೆ ತಿಳಿಸಿದೆ.