Latest

*ಸಿದ್ಧಾಂತವೇ ಬೇರೆಯಾದಾಗ ಮನವೊಲಿಸುವುದು ಹೇಗೆ? ಎಂದ ಶ್ರೀರಾಮುಲು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ಜನಾರ್ಧನ ರೆಡ್ಡಿ ಹೊಸ ಪಕ್ಷ ಘೋಷಣೆ ವಿಚಾರವಾಗಿ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮುಲು, ಈ ಬಗ್ಗೆ ನಾನು ಯಾವುದೇ ಚರ್ಚೆಯನ್ನು ಮಾಡಲ್ಲ ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು, ಜನಾರ್ಧನ ರೆಡ್ಡಿ ಹೊಸ ಪಕ್ಷ ರಚನೆ ವಿಚಾರವಾಗಿ ಪಕ್ಷದ ಮುಖಂದರೊಂದಿಗೆ ಮಾತಾನಡುತ್ತೇನೆ. ಆದರೆ ಸಿದ್ಧಾಂತಗಳೇ ಬೇರೆ ಆದಾಗ ಮನವೊಲಿಸುವುದು ಹೇಗೆ? ಜನಾರ್ಧನ ರೆಡ್ಡಿಯವರು ಹೊಸ ಪಕ್ಷ ಸ್ಥಾಪಿಸಿದ್ದು ಒಳ್ಳೆಯದ್ದ ಕೆಟ್ಟದ್ದ ಎಂದು ನಾನು ಯಾವುದೇ ಚರ್ಚೆಯನ್ನು ಮಾಡಲ್ಲ. ರಾಜಕೀಯವೇ ಬೇರೆ, ಗೆಳತನವೇ ಬೇರೆ ಎಂದು ಹೇಳಿದರು.

Related Articles

ಕಾರ್ಯಕರ್ತರು ನಮ್ಮ ಜೊತೆಗಿದ್ದಾರೆ. ನಾನು ಬಿಜೆಪಿಯನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗಲ್ಲ, ಇದರಲ್ಲಿ ಯಾವುದೇ ಗೊಂದಲಗಳೂ ಇಲ್ಲ, ಜನಾರದ್ಧನ ರೆಡ್ದಿ ಹೊಸ ಪಕ್ಷದ ಸಿದ್ಧಾಂತವೇ ಬೇರೆ, ನಮ್ಮ ಪಕ್ಷದ ಸಿದ್ಧಾತಗಳೇ ಬೇರೆ. ಆತ್ಮೀಯ ಸ್ನೇಹಿತರಾದರೂ ಅವರ ನಿರ್ಧಾರದ ಬಗ್ಗೆ ಯಾವುದೇ ವಿಶ್ಲೇಷಣೆಯನ್ನೂ ಮಾಡಲ್ಲ. ಸ್ನೇಹವೇ ಬೇರೆ. ರಾಜಕೀಯವೇ ಬೇರೆ. ರಾಜಕೀಯದ ಹೊರತಾಗಿಯೂ ಸಂಬಂಧಗಳು ಗಟ್ಟಿಯಾಗಿರುತ್ತದೆ. 2023ರಕ್ಕೆ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನನ್ನ ಕೆಲಸ ನಡೆಯುತ್ತದೆ ಎಂದು ಹೇಳಿದರು.

 

Home add -Advt

*ಮಾಜಿ ಸಚಿವ ಜನಾರ್ಧನ ರೆಡ್ಡಿ ಹೊಸ ಪಕ್ಷ ಘೋಷಣೆ*

https://pragati.taskdun.com/janardhana-reddypressmeetbangalore/

Related Articles

Back to top button